Ad imageAd image

ಬಡವರ ಖಾತೆಗೆ 5 ಸಾವಿರ – ವದಂತಿ ನಂಬಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಜನ

ratnakar
ಬಡವರ ಖಾತೆಗೆ 5 ಸಾವಿರ – ವದಂತಿ ನಂಬಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಜನ
WhatsApp Group Join Now
Telegram Group Join Now

ಕಲಬುರಗಿ: ಬಡವರ ಖಾತೆಗೆ ಪ್ರಧಾನಿ ಮೋದಿ  ಹಾಗೂ ಸಿಎಂ ಸಿದ್ದರಾಮಯ್ಯ  5 ಸಾವಿರ ರೂ. ಹಣ ಹಾಕುವುದಾಗಿ ಸುಳ್ಳು ವದಂತಿ ಹಬ್ಬಿದ ಹಿನ್ನೆಲೆ ಕಲಬುರಗಿ ಅಂಚೆ ಕಚೇರಿ ಎದುರು ಖಾತೆ ತೆರೆಯಲು ಜನರ ದುಂಬಾಲು ಬಿದ್ದಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra Assembly Election) ಬಿಜೆಪಿ (BJP) ಗೆಲುವು ಸಾಧಿಸಿದ ಹಿನ್ನೆಲೆ ಪ್ರಧಾನಿ ಮೋದಿ 5 ಸಾವಿರ ರೂ. ಹಣ ಹಾಕುತ್ತಾರೆ. ಇನ್ನೂ ಕರ್ನಾಟಕದ (Karnataka ByElection) ಉಪಚುನಾವಣೆಯಲ್ಲಿ ಕಾಂಗ್ರೆಸ್ (Congress) ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಹೀಗಾಗಿ ಸಿಎಂ ಸಿದ್ದರಾಮಯ್ಯ ಹಣ ಹಾಕುತ್ತಾರೆ ಎಂಬ ಸಂದೇಶ ವಾಟ್ಸಪ್‌ನಲ್ಲಿ ಹರಿದಾಡಿದೆ.

ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಹಣ ಹಾಕುತ್ತಾರೆ ಹಾಗೂ ಇದಕ್ಕಾಗಿ ಡಿಜಿಟಲ್ ಅಕೌಂಟ್ ಹೊಂದಿರಬೇಕು ಎಂದು ಸುಳ್ಳು ವದಂತಿ ಹಬ್ಬಿದೆ. ಈ ಹಿನ್ನೆಲೆ ಕಲಬುರಗಿ ಅಂಚೆ ಕಚೇರಿ ಎದುರು ಡಿಜಿಟಲ್ ಅಕೌಂಟ್‌ಗಾಗಿ ಬೆಳಿಗ್ಗೆಯಿಂದ ಮಹಿಳೆಯರು ಸೇರಿದಂತೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ.

WhatsApp Group Join Now
Telegram Group Join Now
Share This Article