ಬೆಳ್ತಂಗಡಿ : ಮನೆ ಕೆಲಸಕ್ಕಾಗಿ ಅಂಗಳದಲ್ಲಿದ್ದ ಜೋಡಿಸಿಟ್ಟಿದ್ದ ಕಲ್ಲು ಕುಸಿದು ಬಿದ್ದು ಮೂರು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ನಡೆದಿದೆ.
ಅಶ್ರಪ್ ಎಂಬುವರ ಮೂರು ವರ್ಷದ ಮಹಮ್ಮದ್ ನೌಷೀರ್ ಮೃತಪಟ್ಟ ಮಗು. ಮನೆಯ ಅಂಗಳದಲ್ಲಿ ಮಗು ಆಟ ಆಡುತ್ತಿದ್ದ ಸಂದರ್ಭ ಅಂಗಳದಲ್ಲಿ ಮನೆ ಕೆಲಸಕ್ಕಾಗಿ ಇರಿಸಿದ್ದ ಕಲ್ಲು ಕುಸಿದು ಘಟನೆ ಸಂಭವಿಸಿದೆ.
ಆಕಸ್ಮಿಕವಾಗಿ ಕಲ್ಲು ಜಾರಿ ಮಗುವಿನ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.