ವಿಜಯಪುರ: ಮೀಸಲಾತಿಯಲ್ಲಿ ಲಿಂಗಾಯಿತರಿಗೆ 2ಡಿ ಕೆಟಗರಿ ಸೃಷ್ಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಸವಜಯ ಮೃತ್ಯುಂಜಯ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮತ್ತು ಹಕ್ಕೊತ್ತಾಯ ಮಾಡಿದ್ದು ನಾವು. ಲಿಂಗಾಯಿತರನ್ನು 2 ಡಿ ಗೆ ಸೇರಿಸುವುದಾಗಿ ಹೇಳಿದ್ದಾರೆ. 2 ಡಿ ಮೀಸಲಾತಿ ಕ್ರೆಡಿಟ್ ಪಂಚಮಸಾಲಿಯವರಿಗೆ ಸಲ್ಲುತ್ತದೆ. ದುಡಿದವರು ನಾವು ನಮ್ಮ ಪಾಲು ಎಷ್ಟು ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.
ಸಚಿವ ಸಂಪುಟದಲ್ಲಾದ ನಿರ್ಣಯ ಗೊಂದಲಕ್ಕೀಡು ಮಾಡಿದೆ. ಮೀಸಲಾತಿ ಪ್ರಮಾಣ ಎಷ್ಟು ಎನ್ನುವುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಲಿ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.