spot_img
spot_img
spot_img
28.1 C
Belagavi
Thursday, September 29, 2022
spot_img

ಉಕ್ರೇನ್‌ನಿಂದ ಸುರಕ್ಷಿತವಾಗಿ ಬೆಳಗಾವಿಗೆ ಮರಳಿದ 21 ವಿದ್ಯಾರ್ಥಿಗಳು

spot_img

ಬೆಳಗಾವಿ: ಉಕ್ರೇನ್ ಯುದ್ಧ ಭೂಮಿಯಿಂದ ಜಿಲ್ಲೆಯ 21 ವಿದ್ಯಾರ್ಥಿಗಳನ್ನು “ಆಪರೇಷನ್ ಗಂಗಾ” ಮೂಲಕ ವಾಪಸ್ಸು ಕರೆತರಲಾಗಿದೆ. ರಾಯಬಾಗ, ಕಾಗವಾಡ, ನಿಪ್ಪಾಣಿಯ ತಲಾ ಒಬ್ಬೊಬ್ಬರು ವಿದ್ಯಾರ್ಥಿ ಹಾಗೂ ಬೈಲಹೊಂಗಲದ ಇಬ್ಬರು, ಚಿಕ್ಕೋಡಿಯ ಇಬ್ಬರು, ಗೋಕಾಕದ ಇಬ್ಬರು, ಮೂಡಲಗಿಯ ಇಬ್ಬರು, ಬೆಳಗಾವಿಯ ಐವರು ಸೇರಿ ಒಟ್ಟು 21 ವಿದ್ಯಾರ್ಥಿಗಳನ್ನು ಕೇಂದ್ರ, ರಾಜ್ಯ ಸರ್ಕಾರದ ಸಹಾಯದಿಂದ ಜಿಲ್ಲಾಡಳಿತ ಸುರಕ್ಷಿತವಾಗಿ ಕರೆತಂದು ಅವರವರ ಮನೆಗಳಿಗೆ ತಲುಪಿಸಿದೆ.

ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ತಹಶೀಲ್ದಾರರು ಹೀಗೆ ಜಿಲ್ಲೆಯ ಅಧಿಕಾರಿಗಳು ಉಕ್ರೇನ್‌ನಲ್ಲಿರುವ ಜಿಲ್ಲೆಯ ವಿದ್ಯಾರ್ಥಿಗಳ ಮಾಹಿತಿಗಳನ್ನು ಖುದ್ದಾಗಿ ಪಡೆದುಕೊಂಡು ಅವರನ್ನು ಸುರಕ್ಷಿತವಾಗಿ ಕರೆತರುತ್ತಿದ್ದಾರೆ.

ಅಲ್ಲದೇ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಕ್ರೇನ್‌ನಲ್ಲಿರುವ ಜಿಲ್ಲೆಯ ವಿದ್ಯಾರ್ಥಿಗಳ ಮಾಹಿತಿಯನ್ನು ನೀಡುವುದಕ್ಕಾಗಿ ಪೋಷಕರಿಗೆ, ಸಾರ್ವಜನಿಕರಿಗೆ ಸಹಾಯವಾಗಲಿ ಅನ್ನುವ ಕಾರಣಕ್ಕಾಗಿ 24*7 ಸಹಾಯವಾಣಿ ಕೇಂದ್ರವನ್ನೂ ತೆರಯಲಾಗಿದೆ.  ಸರ್ಕಾರದ ನಿಯಮಗಳನುಸಾರ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ಕರೆತರಲಾಗುತ್ತಿದೆ, ಈ ಸಂಬಂಧ ಸಾರ್ವಜನಿಕರು ಮಾಹಿತಿಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ.

spot_img

Related News

ಗಂಟುರೋಗದಿಂದ ದನಗಳು ಮೃತಪಟ್ಟರೆ 20 ಸಾವಿರ ರೂ.ಗಳ ಪರಿಹಾರ : ಸಿಎಂ ಬೊಮ್ಮಾಯಿ 

ಹಾವೇರಿ : ಗಂಟುರೋಗದಿಂದ ದನಗಳು ಮೃತಪಟ್ಟರೆ 20 ಸಾವಿರ ರೂಪಾಯಿಗಳ ಪರಿಹಾರ ಒದಗಿಸಲಾಗುವುದು ಹಾಗೂ ಗಂಟು ರೋಗದ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು ಹಾವೇರಿಯ ಗುರುಭವನದಲ್ಲಿ ಹಾವೇರಿ...

ಮೋದಿ ಅವರ ನೇತೃತ್ವದಲ್ಲಿ 150 ಸ್ಥಾನಗಳ ಗೆಲುವ ಪಣ : ಯಡಿಯೂರಪ್ಪ 

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -