ಬೆಳಗಾವಿ:ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾದ 23 /24 ಸಾಲಿನ ಪುರುಷರ ಕಬ್ಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ನನಗೆ ಅನ್ಯಾಯವಾಗಿದೆ ಎಂದು ಕಾಂತು ಮಲ್ಲಪ್ಪ ಕಾಗೆ ಆಯ್ಕೆ ಪ್ರಕ್ರಿಯೆ ತಂಡದ ಮೇಲೆ ಆರೋಪ ಮಾಡಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು ದಿನಾಂಕ್ 1/ 11 /2023 ರಂದು ಬಿ ಎಲ್ ಬಿ ಇ ಸಂಸ್ಥೆಯ ಎ ಎಸ್ ಪಾಟೀಲ್ ವಾಣಿಜ್ಯ ಮಹಾವಿದ್ಯಾಲಯ ವಿಜಯಪುರದಲ್ಲಿ ಆಯೋಜಿಸಲಾಗಿದ್ದ ಕಬಡ್ಡಿತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಒಬ್ಬ ಅಭ್ಯರ್ಥಿಯಾಗಿ ಭಾಗವಹಿಸಿದ್ದೆ. ಮೊದಲನೇ ದಿನ ಅಂದರೆ ದಿನ 1/ 11./2023 ರಂದು ಯಾವುದೇ ಭಾವಚಿತ್ರಗಳನ್ನು ಪರಿಶೀಲಸದೆ ಆಟವನ್ನು ಪ್ರಾರಂಭಿಸಿದ್ದಾರೆ.ಮತ್ತು ಎರಡು ಸುತ್ತುಗಳನ್ನು ಆಡಿಸಿದರು, ಇವೆರಡೂದರಲ್ಲಿ ನಾನು ಆಯ್ಕೆಯಾಗಿದ್ದೆ ಆದರೆ ಮರುದಿನ ಅಂದರೆ 2/ 11/ 2023 ರಂದು ನಡೆದ ಮೂರನೇ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಕರೆದಾಗ ನಾನು ನನ್ನ ತಂಡದ ಜೊತೆಗೆ ಆಟದ ಮೈದಾನಕ್ಕೆ ಆಗಮಿಸಿದೆ ಈ ಸಂದರ್ಭದಲ್ಲಿ ನನ್ನನ್ನು ಯಾವುದೇ ಕಾರಣ ನೀಡದೆ ಆಯ್ಕೆ ಸಮಿತಿ ಸದಸ್ಯರಾದ ಈಶ್ವರ ಅಂಗಡಿ ಎಸ್ ಬಿ ಚಳಗೇರಿ. ಲಕ್ಕಪ್ಪ ಬುದನ್ನವರ ಅವರು ಮೂರು ಜನ ಜೋರು ಧ್ವನಿಯಲ್ಲಿ ಮಾತನಾಡಿ ನನ್ನನ್ನು ಆಟದ ಮೈನಾದ ಹೊರಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಯಾವ ಕಾರಣಕ್ಕೆ ನೀವು ನನ್ನನ್ನು ಹೊರ ಹಾಕುತ್ತಿದ್ದೀರಿ ?ಎಂಬ ಪ್ರಶ್ನೆಗೆ ಅವರು ಉತ್ತರ ಕೊಡದೆ ಇರುವುದು ವರ್ತನೆ ಗಮನಿಸಿದಾಗ ಈ ಆಯ್ಕೆ ಪ್ರಕ್ರಿಯೆ ಪೂರ್ವ ನಿರ್ಧಾರಕವಾಗಿತ್ತು.
ಎಂದು ಮೇಲ್ನೋಟಕ್ಕೆ ಎತ್ತಿ ತೋರುತ್ತದೆ ಆದ್ದರಿಂದ ನಾನು ಜಿಲ್ಲಾ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದೇನೆ ನನಗೆ ಅನ್ಯಾಯವಾಗಿದೆ ಈ ಅನ್ಯಾಯವನ್ನು ಸರಿಪಡಿಸಕೊಡಬೇಕೆಂದು ನಾನು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂತು ಮಲ್ಲಪ್ಪ ಕಾಗೆ ತಿಳಿಸಿದರು