ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಾಂತ ಇದುವರೆಗೂ 2,021 ಬಿಪಿಎಲ್ ಕಾರ್ಡುಗಳು (BPL Card) ಎಪಿಎಲ್ ಕಾರ್ಡುಗಳಾಗಿ ಮಾರ್ಪಾಡಾಗಿರುವ ಬಗ್ಗೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾ ಆಹಾರ ಹಾಗೂ ನಾಗರೀಕ ಪೂರೈಕೆ ಸರಬರಾಜು ಇಲಾಖೆ ಉಪನಿರ್ದೇಶಕ ನಾಗರಾಜು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ಟ್ಯಾಕ್ಸ್ ಪಾವತಿ ಮಾಡುತ್ತಿರುವುದು, ಸರ್ಕಾರಿ ನೌಕರರಾಗಿದ್ರೂ ಬಿಪಿಎಲ್ ಕಾರ್ಡು ಪಡೆದಿದ್ದವರು, ಸೇರಿದಂತೆ 1.20 ಲಕ್ಷಕ್ಕಿಂತಲೂ ಹೆಚ್ಚಿನ ವಾರ್ಷಿಕ ಆದಾಯವಿದ್ದ ಕುಟುಂಬಸ್ಥರ ಕಾರ್ಡುಗಳನ್ನ ಬಿಪಿಎಲ್ ಆಗಿ ಬದಲವಾಣೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3 ಲಕ್ಷದ 23 ಸಾವಿರದ 814 ಪಡಿತರ ಚೀಟಿಗಳಿದ್ದು, ಅವುಗಳಲ್ಲಿ 2 ಲಕ್ಷದ 74 ಸಾವಿರದ 299 ಬಿಪಿಎಲ್ ಕಾರ್ಡುಗಳು, 21,485 ಎಪಿಎಲ್ ಕಾರ್ಡುಗಳು ಹಾಗೂ 28,030 ಅಂತ್ಯೋದಯ ಕಾರ್ಡುಗಳಾಗಿವೆ. ಜಿಲ್ಲೆಯಾದ್ಯಾಂತ ಶೇ.92 ರಷ್ಟು ಮಂದಿ ಆಧಾರ್ ಜೋಡಣೆ ಇ-ಕೆವೈಸಿ (E-KYC) ಮಾಡಿಸಿಕೊಂಡಿದ್ದು, ಯಾವುದೇ ಕಾರ್ಡುಗಳು ಅಮಾನತು ರದ್ದು ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.