ಶಾಂಗೈ : ಕೊರೊನಾ ಮಹಾಮಾರಿಯನ್ನು ಹರಡಿಸಿದ ಚೀನಾದಲ್ಲಿ ಅದರ ಆರ್ಭಟ ಇನ್ನೂ ಕಡಿಮೆಯಾಗುತ್ತಿಲ್ಲ. ಸದ್ಯ ಕಾಣಿಸಿಕೊಂಡಿರುವ ಹೊಸ ಅಲೆಗೆ ಸಹಸ್ರಾರು ಮಂದಿ ಬಲಿಯಾಗಿದ್ದು, ಸಾವಿನ ಸರಣಿ ಮುಂದುವರೆದಿದೆ.
ಜನವರಿ 12ರ ಹೊತ್ತಿಗೆ ಆಸ್ಪತ್ರೆಗಳಲ್ಲಿ 60 ಸಾವಿರ ಮಂದಿ ಮೃತಪಟ್ಟಿದ್ದರು ಎಂದು ಹೇಳಲಾಗಿದ್ದು, ಇದೀಗ ಕಳೆದ ಒಂದು ವಾರದಲ್ಲಿ 13,000 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. ಆಸ್ಪತ್ರೆಗಳು ಕಿಕ್ಕಿರಿದು ತುಂಬಿದ್ದು, ವೈದ್ಯಕೀಯ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ ಎನ್ನಲಾಗಿದೆ.
ಹೊಸ ವರ್ಷ ಆಚರಣೆಯ ರಜಾ ಅವಧಿಯ ವೇಳೆಗೆ ಚೀನಾದಲ್ಲಿ ಪ್ರತಿನಿತ್ಯ 36,000ಕ್ಕೂ ಅಧಿಕ ಮಂದಿ ಸಾವನ್ನಪ್ಪಬಹುದು ಎಂದು ಅಂದಾಜಿಸಲಾಗಿದೆ.