spot_img
spot_img
spot_img
18.7 C
Belagavi
Monday, September 26, 2022
spot_img

ಆಂಜನೇಯ ನಗರದಲ್ಲಿ 10ನೇ ದಿನದ ಲಿಂಗಾಯತ ಧರ್ಮ ಜಾಗೃತಿ ಪಾದಯಾತ್ರೆ 

spot_img
spot_img

For Breaking News Download App

ಬೆಳಗಾವಿ :889 ನೇ ಬಸವ ಜಯಂತಿಯ ನಿಮಿತ್ಯ ಆಂಜನೇಯ ನಗರದಲ್ಲಿ 10 ನೇ ದಿನದ ಧರ್ಮ ಜಾಗೃತಿ ಸದ್ಭಾವಣೆ ಪಾದಯಾತ್ರೆಯು ನಾಗನೂರು ರುದ್ರಾಕ್ಷಿ ಮಠದ ಪರಮ ಪೂಜ್ಯ ಅಲ್ಲಮ ಪ್ರಭು ಸ್ವಾಮಿಜಿಗಳ ನೇತೃತ್ವದಲ್ಲಿ ಆಂಜನೇಯ ನಗರದ ಎಲ್ಲ ಬಡಾವಣೆಗಳಲ್ಲಿ ಜರುಗಿತು.

ಧರ್ಮ ಜಾಗೃತಿ ಪಾದಯಾತ್ರೆಯು ಶಿವಾನಂದ ಮಹಾಸ್ವಾಮೀಜಿ ಹಂದಿಗುಂದ ಹಾಗೂ ಡಾ. ಬಸವಾನಂದ ಸ್ವಾಮಿಜಿ, ಪೂಜ್ಯ ಓಂ ಗುರುಜಿ, ಕಾರಂಜಿಮಠದ ಪೂಜ್ಯ ಶಿವಯೋಗಿ ದೇವರು ಮತ್ತು ಇತರ ಸ್ವಾಮಿಜೀಗಳ ನೇತೃತ್ವದಲ್ಲಿ ಪ್ರಾರಂಭವಾಗಿದ್ದು, 10 ನೇ ದಿನದ ಪಾದಯಾತ್ರೆಯಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ನಗರ ಸೇವಕರು, ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ಬಸವರಾಜ ರೊಟ್ಟಿ, ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಮಹಾಂತೇಶ ಗುಡಸ, ಗಿರಿರಾಜ ಪಾಟೀಲ, ರಾಜು ಪದ್ಮನ್ನವರ, ಶಿವಾನಂದ ವಾಗರವಾಡಿ ಮತ್ತು ಬಸವಾದಿ ಭಕ್ತರುಗಳು ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಜರುಗಿತು.

ಪಾದಯಾತ್ರೆಯು ಆಂಜನೇಯ ನಗರದ ಡೈರಿಯಿಂದ ಪ್ರಾರಂಭವಾಗಿ ಆಂಜನೇಯ ನಗರದ ಗಣಪತಿ ಗುಡಿ ಹತ್ತಿರದ ಅನುಭವ ಮಂಟಪದಲ್ಲಿ ಮುಕ್ತಾಯವಾಗಿ ನಂತರದಲ್ಲಿ ಪರಮ ಪೂಜ್ಯ ಅಲ್ಲಮ ಪ್ರಭು ಸ್ವಾಮಿಜಿಗಳು ಎಲ್ಲರಿಗೂ ರುದ್ರಾಕ್ಷಿ ಧಾರಣೆ ಮಾಡುವುದರೊಂದಿಗೆ ಮಹಾಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -