spot_img
spot_img
spot_img
18.5 C
Belagavi
Thursday, September 29, 2022
spot_img

ನೂರಕ್ಕೆ ನೂರು ಅಂಕ ಗಳಿಸಿದ ಕುಂದಾನಗರಿಯ 10 ವಿದ್ಯಾರ್ಥಿಗಳು

spot_img

ಬೆಳಗಾವಿ: ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪರೀಕ್ಷೆಯ ನಂತರ ಪಲಿತಾಂಶಕ್ಕೆ ಕಾಯುತ್ತ ಕುಳಿತ ವಿದ್ಯಾರ್ಥಿಗಳ ಮುಖದಲ್ಲಿ ಇಂದು ಮಂದಹಾಸ ಮೂಡಿದ್ದು ಈ ಬಾರಿಯ ಪಲಿತಾಂಶ ಒಂದು ಮಾದರಿ ದಾಖಲೆಯಂತಿದ್ದು ರಾಜ್ಯದಲ್ಲಿ ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಸಂಪೂರ್ಣ ಅಂಕಗಳನ್ನು ಪಡೆದು ಟಾಪರ್ ಗದ್ದುಗೆ ಗಿಟ್ಟಿಸಿಕೊಂಡಿದ್ದಾರೆ.

145 ಟಾಪರ್ ಗಳ ಪೈಕಿ 10 ಜನ ವಿದ್ಯಾರ್ಥಿಗಳು ಬೆಳಗಾವಿ ಜಿಲ್ಲೆಯವರಾಗಿದ್ದು ಜಿಲ್ಲೆಗೆ ಒಂದು ಹೆಮ್ಮೆಯ ಸಂಗತಿಯಾಗಿದೆ. 3 ಜನ ಕನ್ನಡ ಮಾದ್ಯಮ ವಿದ್ಯಾರ್ಥಿಗಳಾಗಿದ್ದರೆ 7 ಜನ ಆಂಗ್ಲ ಮಾದ್ಯಮದ ವಿದ್ಯಾರ್ಥಿಗಳು 125 ಕ್ಕೆ 125 ಅಂಕಗಳನ್ನು ಬಾಚಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಸವದತ್ತಿ ತಾಲೂಕಿನ ಸತ್ತಿಗೇರಿ ಕೆಪಿಎಸ್ ವಿದ್ಯಾರ್ಥಿನಿ ಸಹನಾ ಮಹಾಂತೇಶ ರಾಯರ, ಖಾನಾಪುರ ತಾಲೂಕಿನ ನಂದಗಡ ಸಂಗೊಳ್ಳಿ ರಾಯಣ್ಣ ಮೆಮೋರಿಯಲ್ ಸ್ಕೂಲ್ ನ ಸ್ವಾತಿ ಸುರೇಶ್ ತೊಲಗಿ, ರಾಮದುರ್ಗ ಕ್ಯಾಂಬ್ರಿಜ್ ಆಂಗ್ಲ ಮಾಧ್ಯಮ ಶಾಲೆಯ ಆದರ್ಶ ಬಸವರಾಜ ಹಾಲಬಾವಿ,

ಬೆಳಗಾವಿ ಎಂ.ವಿ.ಹೆರವಾಡ್ಕರ ಆಂಗ್ಲ ಮಾಧ್ಯಮ ಶಾಲೆಯ ಅಮೋಘ ಎನ್. ಕೌಶಿಕ್,ರಾಮದುರ್ಗ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ರೋಹಿಣಿ ಗೌಡರ, ಬೆಳಗಾವಿ ಕೆಎಲ್ ಎಸ್ ಆಂಗ್ಲಮಾಧ್ಯಮ ಶಾಲೆಯ ವೆಂಕಟೇಶ ಯೋಗೇಶ್ ಡೋಂಗ್ರೆ ಅವರು 625 ಕ್ಕೆ ಅಂಕ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

spot_img

Related News

ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರು: ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ದಳದ ಅಧಿಕಾರಿಗಳು ಡಿ ಕೆ ಶಿವಕುಮಾರ್...

ಮೂರು ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚವ್ಹಾಣ್ ನೇಮಕ

ನವದೆಹಲಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚವ್ಹಾಣ್ ಅವರನ್ನು ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ. ಎರಡನೇ ಸಿಡಿಎಸ್ ಅನಿಲ್ ಚವ್ಹಾಣ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -