ಬೆಳಗಾವಿ: ನಾಳೆಯಿಂದ ಹತ್ತು ದಿನಗಳ ಕಾಲ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ರಾಷ್ಟ್ರಪತಿಗಳಿಂದ ಅಂಗೀಕಾರವಾದ 10 ವಿಧೇಯಕಗಳು ಮಂಡನೆಯಾಗಲಿವೆ ಎಂದು ಹಂಗಾಮಿ ಸಭಾಪತಿ ರಘುನಾಥ್ ಮಲ್ಲಾಪೂರೆ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಷತ್ ಸದಸ್ಯರು 1452 ಪ್ರಶ್ನೆಗಳನ್ನು ಕೇಳಲು ಅನುಮತಿ ಕೇಳಿದ್ದಾರೆ. ಆದರೆ 150 ಪ್ರಶ್ನೆಗಳನ್ನ ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಪ್ರತಿದಿನ 15 ಪ್ರಶ್ನೆ ಮೀರದಂತೆ ಚುಕ್ಕಿರಹಿತ ಪ್ರಶ್ನೆಗಳಿಗೆ ಅವಕಾಶ ಕೊಡಲಿದ್ದೇವೆ. ಲಿಖಿತ ರೂಪದಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರ ಕೊಡಲು ಅವಕಾಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸೂಚನೆಯ 51 ಅರ್ಜಿಗಳು ಬಂದಿವೆ. ತುಂಬಾ ಯೋಗ್ಯ ಹಾಗೂ ಮುಖ್ಯ ಎನಿಸಿರುವ ವಿಷಯಗಳಿಗೆ ಸಮಯವಕಾಶ ಕೊಡಲಾಗುತ್ತೆ. 1 ಖಾಸಗಿ ವಿಧೇಯಕ ಹಾಗೂ 1 ನಿರ್ಣಯವಿದೆ. 1 ವಿಧೇಯಕವನ್ನ ಚರ್ಚೆಗೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.