ಸ್ನಾತಕೋತ್ತರ ಪರೀಕ್ಷೆಗೆ ಹಾಜರಾದ 85ರ ವಯೋ ವೃದ್ಧ, ನಿವೃತ್ತಿಯ ನಂತರ 4 ಸ್ನಾತಕೋತ್ತರ ಪದವಿ ಪಡೆದ ನಿಂಗಯ್ಯ

Jun 8, 2024 - 17:50
 64
Google  News Join WhatsApp Join Telegram View ePaper

ಸ್ನಾತಕೋತ್ತರ ಪರೀಕ್ಷೆಗೆ ಹಾಜರಾದ 85ರ ವಯೋ ವೃದ್ಧ, ನಿವೃತ್ತಿಯ ನಂತರ 4 ಸ್ನಾತಕೋತ್ತರ ಪದವಿ ಪಡೆದ ನಿಂಗಯ್ಯ

Panchayat Swaraj Samachar News Desk.

ವಿಜಯಪುರ: ಮನಸ್ಸಿದ್ದರೆ ಎಂಥ ಸಾಧನೆಯನ್ನಾದರೂ ಮಾಡಬಹುದು. ಜಾತಿ, ಮತ, ಪಂಥ ವರ್ಷ, ವಯಸ್ಸಿನ ಅಂತರ ಸಾಧನೆಗೆ ಅಡ್ಡಿಯಾಗಲಾರದು. ಈ ಮಾತು ಇಲ್ಲಿ ಸಾಕ್ಷಿಯಾಗಿದೆ. ಮಕ್ಕಳು ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬೇಕಾಗಿರುವ ವಯಸ್ಸಿನಲ್ಲೂ, ಬಾಗಲಕೋಟೆ ಜಿಲ್ಲೆ ತಾಲೂಕಿನ ಗುಡೂರಿನ ಗ್ರಾಮದ 85ರ ವಯೋ ವೃದ್ಧ ನಿಂಗಯ್ಯ ಒಡೆಯರ ನಾಲ್ಕು ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಇವರು ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಬಳಿಕ ಈ ಸಾಧನೆ ಮಾಡಿದ್ದಾರೆ. ಇವರಿಗೆ ಮತ್ತಷ್ಟು ಮಗದಷ್ಟು ಕಲಿಯಬೇಕೆಂಬ ಹಂಬಲ. ಇದರ ಫಲವಾಗಿಯೇ ಇಂದು ಅವರು ಮತ್ತೆ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರಿಗೆ 68 ಹಾಗೂ 55 ವರ್ಷದ ಇನ್ನಿಬ್ಬರು ವ್ಯಕ್ತಿಗಳು ಸಾಥ್ ನೀಡಿದ್ದಾರೆ!

ಬಿಎಲ್ಡಿಇ ಸಂಸ್ಥೆಯ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕೇಂದ್ರ ಆಯೋಜಿಸಿರುವ ಎಂಎ ಇಂಗ್ಲಿಷ್ ಪರೀಕ್ಷೆಗೆ 85 ವರ್ಷದ ನಿಂಗಯ್ಯ ಒಡೆಯರ ಹಾಜರಾಗಿದ್ದಾರೆ. ಈಗಾಗಲೇ ಬಾಹ್ಯ ವಿದ್ಯಾರ್ಥಿಯಾಗಿಯೇ ಕನ್ನಡ, ಹಿಂದಿ ಮತ್ತು ಸಮಾಜ ಶಾಸ್ತ್ರ ವಿಷಯಗಳಲ್ಲಿ ಎಂಎ ಪದವಿ ಪಡೆದಿದ್ದಾರೆ. ಇದೀಗಾ ನಿಂಗಯ್ಯ ಒಡೆಯರ ಇಂಗ್ಲೀಷ್ ವಿಷಯದಲ್ಲಿ ಎಂಎ ಪದವಿಗಾಗಿ ಪರೀಕ್ಷೆಗೆ ಹಾಜರಾಗಿದ್ಧಾರೆ. ಇವರ ಜೊತೆಗೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ 68 ವರ್ಷದ ಪಿಎಂ ಮಡಿವಾಳ ಹಾಗೂ ನಾಲ್ಕೈದು ವರ್ಷದಲ್ಲಿ ಸೇವಾ ನಿವೃತ್ತಿಯಾಗಲಿರುವ ಶಿವಮೊಗ್ಗದ 55 ವರ್ಷದ ಕಲಾ ಶಿಕ್ಷಕ ನಾಗನಗೌಡ ಪಾಟೀಲ ಅವರೂ ಸಾಥ್ ನೀಡಿದ್ದಾರೆ.

Google News Join Facebook Live 24/7 Help Desk

Tags: