ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಭಾರೀ ಕುಸಿತ; 500 ಪಾಯಿಂಟ್ಸ್ ಕುಸಿತ

Jun 4, 2024 - 09:58
 27
Google  News Join WhatsApp Join Telegram View ePaper

ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಭಾರೀ ಕುಸಿತ; 500 ಪಾಯಿಂಟ್ಸ್ ಕುಸಿತ

Panchayat Swaraj Samachar News Desk.

ಮುಂಬೈ: ಇಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಭಾರೀ ಕುಸಿತ ಕಾಣುತ್ತಿದೆ. ಸೆನ್ಸೆಕ್ಸ್ 1600 ಪಾಯಿಂಟ್ಸ್  ಮತ್ತು ನಿಫ್ಟಿ 500 ಪಾಯಿಂಟ್ಸ್ ಕುಸಿತ ಕಂಡಿದೆ. ಎಕ್ಸಿಟ್ ಪೋಲ್ ಬಳಿಕ ಸೋಮವಾರ ಆರಂಭದಿಂದಲೂ ಜಿಗಿತ ಕಂಡಿತ್ತು. ಇಂದು ಮಾರುಕಟ್ಟೆ ಓಪನ್ ಆಗುತ್ತಿದ್ದಂತೆ ಕುಸಿತ ಕಾಣಲು ಆರಂಭಿಸಿದೆ. ಈ ಬೆಳವಣಿಗೆ ಮಾರುಕಟ್ಟೆಯಲ್ಲಿ ತೀವ್ರ ಆತಂಕವನ್ನು ಸೃಷ್ಟಿಸುತ್ತಿದೆ. 

ಚುನಾವಣೋತ್ತರ ಸಮೀಕ್ಷಾ ವರದಿಗಳು ಬಾಂಬೆ ಷೇರುಪೇಟೆಗೆ ಭರ್ಜರಿ ಕಿಕ್‌ ನೀಡಿತ್ತು. ‘ಮೋದಿ ಸರ್ಕಾರ ಆರ್ಥಿಕತೆ ಉತ್ತೇಜನಕ್ಕೆ ಮತ್ತಷ್ಟು ಕ್ರಮ ಕೈಗೊಳ್ಳಲಿದೆ’ ಎಂಬ ನಿರೀಕ್ಷೆಯಲ್ಲಿ ಸೆನ್ಸೆಕ್ಸ್‌ ಸೋಮವಾರ 2507 ಅಂಕಗಳ ಭಾರೀ ಏರಿಕೆ ಕಂಡು ದಾಖಲೆಯ 76468 ಅಂಕಗಳಲ್ಲಿ ಮುಕ್ತಾಯವಾಗಿತ್ತು.ಇದು 2019ರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಂಡುಬಂದ ಸೆನ್ಸೆಕ್ಸ್‌ನ ಗರಿಷ್ಠ ದೈನಂದಿನ ಏರಿಕೆಯಾಗಿತ್ತು. ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 13.78 ಲಕ್ಷ ಕೋಟಿ ರೂ ಹೆಚ್ಚಳವಾಗಿದೆ.

Google News Join Facebook Live 24/7 Help Desk

Tags: