ಶಂಭು ಕಲ್ಲೋಳ್ಕರ್ ಅವರು ಮೊದಲು ಕಾಂಗ್ರೆಸ್ ಪಕ್ಷದ ಸಿದ್ಧಾಂತ ತಿಳಿದುಕೊಳ್ಳಲಿ ಮಂಜು ಕಾಂಬಳೆ

Apr 2, 2024 - 15:40
Apr 2, 2024 - 16:51
 69
Google  News Join WhatsApp Join Telegram Live

ಶಂಭು ಕಲ್ಲೋಳ್ಕರ್ ಅವರು ಮೊದಲು ಕಾಂಗ್ರೆಸ್ ಪಕ್ಷದ ಸಿದ್ಧಾಂತ ತಿಳಿದುಕೊಳ್ಳಲಿ ಮಂಜು ಕಾಂಬಳೆ

Panchayat Swaraj Samachar News Desk.

ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಗಳ ಕಾಂಗ್ರೆಸ್ ಪಕ್ಷ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ನಂತರ ಅನೇಕ ಜನರ ಹಾಗೂ ವಿಭಿನ್ನವಾದ ಹೇಳಿಕೆಗಳು ಕೇಳಿ ಬರ್ತಾ ಇದೆ ಅದರಂತೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ ಪಕ್ಷದ ವತಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಅವರು ಒಬ್ಬ ಆಕಾಂಕ್ಷಿ ಆಗಿದ್ದರು ಅದರಂತೆ ಸುದ್ದಿಗೋಷ್ಠಿ ನಡೆಸಿ ಶಂಭು ಕಲ್ಲೋಳ್ಕರ್ ರವರು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷ ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಿದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ್ ಜಾರಕಿಹೊಳಿ ಅವರು ಕುರುಬ ಸಮಾಜಕ್ಕೆ ನ್ಯಾಯ ಮಾಡಿದ್ದಾರೆ ಎಂದು ಶಂಭು ಕಲ್ಲೋಳ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಂಜು ಕಾಂಬಳೆ ಅವರು ಶಂಭು ಕಲ್ಲೋಳ್ಕರ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಶಂಭು ಕಲ್ಲೋಳ್ಕರ್ ಮೊದಲು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ತಿಳಿದುಕೊಳ್ಳಲಿ ಮತ್ತು ಹಲವಾರು ವರ್ಷಗಳಿಂದ ದುಡಿತ್ತಿರುವ ಕಾರ್ಯಕರ್ತರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಲಿ ಅದರಂತೆ ಕಳೆದ ಬಾರಿ 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾವೀರ್ ಮೋಹತೆ ಅವರಿಗೆ ಬೆಂಬಲ ನೀಡಿ ಅವರನ್ನು ಗೆಲ್ಲಿಸಿ ತರುವಲ್ಲಿ ಸಹಕಾರಿ ಆಗಬೇಕಾಗಿತ್ತು. 

ಆದರೆ ತಮ್ಮ ಸ್ವಾರ್ಥ ರಾಜಕಾರಣ ದಿಂದಾಗಿ ನಮ್ಮ ನಾಯಕರುಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಇದ್ದಾರೆ.

 ಇಂಥ ಆರೋಪಗಳಿಗೆ ಯಾವುದೇ ರೀತಿಯ ಮಹತ್ವ ಇಲ್ಲ ಮಾಜಿ ಶಾಸಕ ರಮೇಶ್ ಕುಡಚಿ ಅವರಿಗೆ ಚುನಾವಣೆ ಬಂದ ನಂತರ ಪಕ್ಷ ನೆನಪಾಗುತ್ತೆ ಕಾರ್ಯಕರ್ತರು ನೆನಪಾಗುತ್ತಾರೆ ಟೀಕಿಸಿದ ಮಂಜು ಕಾಂಬ್ಳೆ ಪಕ್ಷ ಸಂಘಟನೆ ಸಲುವಾಗಿ ಹಿರಿಯ ನಾಯಕರುಗಳು ಕೆಲಸ ಮಾಡಬೇಕು ಕಾರ್ಯಕರ್ತರಿಗೆ ಬೆಂಬಲ ನೀಡಬೇಕು ಅದನ್ನು ಬಿಟ್ಟು ಇಲ್ಲಸಲ್ಲದ ಪಕ್ಷದ ನಾಯಕರಗಳ ಮೇಲೆ ಆರೋಪಗಳನ್ನು ಮಾಡಿದರೆ ಏನು ಅರ್ಥ‌‌ ? ಎಂದು ಪ್ರಶ್ನಿಸಿದರು 2024ರಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಮತಕ್ಷೇತ್ರ ಕಾಂಗ್ರೆಸ್ ಬಹುಮತದಿಂದ ವಿಜಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

.

Google News Join Facebook Live 24/7 Help Desk

Tags: