ವಿಶೇಷ ಸಂದರ್ಶನ: ಕೃಷಿ ಇಲಾಖೆಯಲ್ಲಿವೆ ರೈತರಿಗಾಗಿ ಈ ಎಲ್ಲ ಯೋಜನೆ...

Jun 10, 2024 - 19:17
Jun 11, 2024 - 10:37
 269
Google  News Join WhatsApp Join Telegram View ePaper

ವಿಶೇಷ ಸಂದರ್ಶನ: ಕೃಷಿ ಇಲಾಖೆಯಲ್ಲಿವೆ ರೈತರಿಗಾಗಿ ಈ ಎಲ್ಲ ಯೋಜನೆ...

Panchayat Swaraj Samachar News Desk.

ಮುಂಗಾರು ಮಳೆ ಉತ್ತಮವಾಗಿ ಪ್ರಾರಂಭವಾಗಿರುವುದರಿಂದ ಬರಗಾಲದಿಂದ ಬೆಂದಿದ್ದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ. ತಲೆ ಮೇಲೆ ಕೈಹೊತ್ತು ಕುಳಿತಿದ್ದ ರೈತ ಹೆಗಲಮೇಲೆ ನೇಗಿಲು ಹೊತ್ತು ಬಿತ್ತನೆಕಾರ್ಯಕ್ಕೆ ಮುಂದಾಗಿದ್ದಾನೆ. ಖುಷಿಯಲ್ಲಿದ್ದ ರೈತನಿಗೆ ಕೃಷಿ ಇಲಾಖೆ ಯಾವ ಯೋಜನೆಗಳನ್ನು ನೀಡುತ್ತಿದೆ ಮತ್ತು ಅದರ ಉಪಯೋಗ ಯಾವ ರೀತಿ ಪಡೆದುಕೊಳ್ಳಬಹುದು ಎಂಬುದರ ಕುರಿತಾಗಿ ಬೆಳಗಾವಿ ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಎಸ್ ಪಾಟೀಲ್ ಪಂಚಾಯತ್ ಸ್ವರಾಜ್ ಸಮಾಚಾರ ಜೊತೆ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದು ಓದಿ ರೈತಯೋಜನೆಯ ಬಗ್ಗೆ ತಿಳಿದುಕೊಳ್ಳಿ.

ಪ್ರಶ್ನೆ1: ಬೆಳಗಾವಿ ಜಿಲ್ಲೆಯಾದ್ಯಂತ ಎಷ್ಟು ಬಿತ್ತನೆ ಆಗಬೇಕಾಗಿದೆ ? ಈಗ ಎಷ್ಟಾಗಿದೆ ?

7,42,000 ಹೆಕ್ಟೇರ ಪ್ರದೇಶ ಬಿತ್ತನೆ ಗುರಿ ಹೊಂದಿದ್ದು ಈಗ 25,000,ಹೇಕ್ಟೇರ ಬಿತ್ತನೆ ಪೂರ್ಣಗೊಂಡಿದೆ. ಹಾಗೂ ರೈತರಿಗೆ ಬೀಜ ರಸಗೊಬ್ಬರ ರಿಯಾಯಿತಿ ದರದಲ್ಲಿ ನೀಡಲು ಜಿಲ್ಲೆಯಾದ್ಯಂತ 185ಕ್ಕೂ ಹೆಚ್ಚುವರಿಯಾಗಿ ಕೇಂದ್ರಗಳು ಮತ್ತು ಪಿಕೆಪಿಎಸ್ ಒಳಗೊಂಡ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಾದ್ಯಂತ ಸೋಯಾಬೀನ ಬೀಜ 3200 ಕ್ವಿಂಟಲ್ ಬೇಡಿಕೆಯಿದ್ದು ಇಲಾಖೆಯು 33000 ಕ್ವಿಂಟಾಲ್ ದಾಸ್ಥಾನು ಮಾಡಲಾಗಿದೆ. ಅದೇ ರೀತಿ ತೊಗರಿ ,ಭತ್ತ, ಹೆಸರು, ಉದ್ದು ಸೇರಿದಂತೆ ಇತರ ಬೀಜಗಳನ್ನು ಇಲಾಖೆಯಿಂದ ಪೂರ್ಣ ಪ್ರಮಾಣದಲ್ಲಿ ಸಿದ್ಧಪಡಿಸಿಕೊಳ್ಳಲಾಗಿದೆ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಈಗಾಗಲೇ ಶೇಕಡ 50 ರಿಂದ 60 ರಷ್ಟು ರೈತರಿಗೆ ನೀಡಲಾಗಿದೆ.

 ಪ್ರಶ್ನೆ2: ಸಣ್ಣ ರೈತರಿಗೆ ಕೃಷಿ ಉಪಕರಣಗಳನ್ನು ನೀಡಲಾಗುವುದೆ? ಹಾಗಾದ್ರೆ ಸಣ್ಣ ರೈತರು ಯಾರಿಗೆ ಸಂಪರ್ಕ ಮಾಡಬೇಕು‌ ?

ಬಿತ್ತನೆಗೆ ಬೇಕಾಗುವ ಉಪಕರಣಗಳು ಮತ್ತು ಬಿತ್ತನೆ ಆದ ನಂತರದ ರೈತರಿಗೆ ಕೃಷಿ ಉಪಕರಣಗಳು ಅವಶ್ಯಕತೆ ಇದ್ದಲ್ಲಿ ನೀಡಲಾಗುತ್ತಿದೆ. ಅದರಲ್ಲಿ ಹರಿವು, ಕಳೆ ತೆಗೆಯುವ ಸೈಕಲ್ ಯಂತ್ರ, ಮುಂತಾದ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಸ್ಥಳೀಯ ಅಥವಾ ಹತ್ತಿರದ ಕೃಷಿ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಈ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಶ್ನೆ3: ಬೆಳೆ ವಿಮಾ ಕೆಲ ರೈತರಿಗೆ ತಲುಪುತ್ತಿದೆ ಇನ್ನೂ ಕೆಲವು ರೈತರಿಗೆ ತಲುಪುತ್ತಿಲ್ಲ ಇದರ ಕುರಿತು ನಿಮ್ಮ ಅಭಿಪ್ರಾಯವೇನು?

ಕಳೆದ ಬಾರಿ ಬರಗಾಲ ಇರುವುದರಿಂದ ಅನೇಕ ರೈತರು ಸಂಕಟದಲ್ಲಿದ್ದರು. ಹಾನಿಗೊಳಗಾದ ಬೆಳೆಗಳಿಗೆ ವಿಮ ಈಗಾಗಲೇ ಕೆಲ ರೈತರ ಖಾತೆಗಳಿಗೆ ತಲುಪುತ್ತಿದೆ ಇನ್ನೂ ಒಂದೆರಡು ವಾರಗಳಲ್ಲಿ ಎಲ್ಲಾ ರೈತರುಗಳಿಗೆ ಬೆಳೆ ವಿಮಾ ತಲುಪಲಿದೆ.

ಪ್ರಶ್ನೆ4: ವಾಣಿಜ್ಯ ಬೆಳೆಗಳ ಬಿತ್ತನೆ ಸಲುವಾಗಿ ಇಲಾಖೆ ಎಷ್ಟು ಗುರಿ ಇಟ್ಟುಕೊಂಡಿದೆ‌ ?

ಈ ಬಾರಿ ಉತ್ತಮ ಮಳೆಯಾಗಿರುವುದರಿಂದಾಗಿ ಸೋಯಾಬಿನ್ ಬೆಳೆ ಹೆಚ್ಚಿನ ಪ್ರದೇಶಗಳಲ್ಲಿ ಬರಬಹುದು ಎಂದು ಗುರಿ ಇಟ್ಟುಕೊಂಡಿದ್ದೇವೆ. ದ್ವಿದಳ ಧಾನ್ಯಗಳನ್ನು ಬೆಳೆಸಲು ಹೆಚ್ಚಿನ ಆದ್ಯತೆ ನೀಡಬೇಕೆಂದು ಕೇಂದ್ರ ಸರ್ಕಾರ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ, ಅನಂತಪುರ್ ಪ್ರದೇಶದಲ್ಲಿ ತೊಗರಿ ಬೆಳೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಪ್ರಶ್ನೆ 5: ಮಳೆ ಆಧಾರಿತ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಗೋಸ್ಕರ ಈ ಬಾರಿ ಇಲಾಖೆ ಕೃಷಿ ಹೊಂಡಗಳ ಕುರಿತು ಯಾವ ಕ್ರಮ ಕೈಗೊಂಡಿದೆ‌ ?

ಮಳೆ ನೀರು ಸಂಗ್ರಹಿಸುವ ಸಲುವಾಗಿ ಮಳೆ ಆಧಾರಿತ ಬೇಸಾಯ ಪ್ರದೇಶಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯ ತಾಲೂಕುಗಳಾದ ಸೌವದತ್ತಿ, ರಾಮದುರ್ಗ, ಗೋಕಾಕ, ರಾಯಬಾಗ, ಅಥಣಿ ತಾಲೂಕುಗಳಲ್ಲಿ ಕೃಷಿ ಹೊಂಡ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.

ರೈತರಿಗೆ ಕೃಷಿ ಹೊಂಡ ನಿರ್ಮಾಣಿಸಲು ಸಹಕಾರ ನೀಡಲಾಗುವುದು ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ನಾನು ರೈತರಿಗೆ ವಿನಂತಿಸಿಕೊಳ್ಳುತ್ತೇನೆ.

Google News Join Facebook Live 24/7 Help Desk

Tags: