ವಿಶೇಷ ಸಂದರ್ಶನ: ಒಂದು ವರ್ಷದ ಅಧಿಕಾರವದಿಯ ಬಗ್ಗೆ ಏನಂತಾರೆ ಆಸಿಫ್ ಸೇಟ್

Jun 7, 2024 - 09:55
Jun 7, 2024 - 11:42
 117
Google  News Join WhatsApp Join Telegram View ePaper

ವಿಶೇಷ ಸಂದರ್ಶನ: ಒಂದು ವರ್ಷದ ಅಧಿಕಾರವದಿಯ ಬಗ್ಗೆ ಏನಂತಾರೆ ಆಸಿಫ್ ಸೇಟ್

Panchayat Swaraj Samachar News Desk.

ರಾಜ್ಯಸರಕಾರ ಒಂದು ವರ್ಷದ ಅಧಿಕಾರ ಸಮರ್ಪಕವಾಗಿ ನಿರ್ವಹಿಸಿದೆ. ಎದುರುಜಡೆ ಅದೆಷ್ಟೋ ಸವಾಲುಗಳನಿಟ್ಟುಕೊಂಡು ಹೆಜ್ಜೆ ಹಾಕಿದರೂ ಮತದಾರರಿಗೆ ಕೊಟ್ಟಿದ್ದ ಭರವಸೆಯನ್ನು ಈಡೆರಿಸುವ ನಿಟ್ಟಿನಲ್ಲಿಯೇ ಕಾರ್ಯನಿರ್ವಹಿಸಿದೆ. ಸರಕಾರದ ಒಂದು ಭಾಗವಾಗಿರುವ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್ (ರಾಜು) ಸೆಟ್ ಅವರು ಕೂಡ ಒಂದು ವರ್ಷ ಶಾಸಕರಾಗಿ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು ಪಂಚಾಯತ್ ಸ್ವರಾಜ್ ಸಮಾಚಾರದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಪ್ರಶ್ನೆ1: ನಿಮ್ಮ ಸರ್ಕಾರಕ್ಕೆ ಹಾಗೂ ಗ್ಯಾರಂಟಿಗಳಿಗೆ ಒಂದು ವರ್ಷ ಪೂರ್ಣಗೊಂಡಿದೆ ಈ ಕುರಿತು ಏನು ಹೇಳುತ್ತೀರಿ ?

ಆ.ಸೆ: ಸರ್ಕಾರ ಒಂದು ವರ್ಷ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜೊತೆಗೆ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ ಇದರಿಂದ ಕಡು ಬಡವರಿಗೆ ಅವರ ಜೀವನಮಟ್ಟ ಸುಧಾರಣೆ ಮಾಡಲು ಉಪಯೋಗವಾಗುತ್ತಿವೆ..

ಪ್ರಶ್ನೆ2: ಬೆಳಗಾವಿ ಉತ್ತರ ಮತಕ್ಷೇತ್ರದ ಅಭಿವೃದ್ಧಿ ಕುರಿತು ಮಾಜಿ ಶಾಸಕ ಅನಿಲ್ ಬೆನಕೆ ಅವರು ನಾ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಥಾ ಸ್ಥಿತಿ ಕಾಯ್ದುಕೊಂಡು ಹೋದರೆ ಅದೇ ಬಹಳ ದೊಡ್ಡದು ಎಂದು ತಮಗೆ ಒಂದು ಸಲಹೆ ನೀಡಿದ್ದಾರೆ ಇದರ ಕುರಿತು ಏನು ಹೇಳುತ್ತೀರಿ ?

ಆ.ಸೆ: ಮಾಜಿ ಶಾಸಕರು ಬಿಜೆಪಿ ನಾಯಕರಾದ ಅನಿಲ್ ಬೆನಕೆ ಅವರು ನನ್ನ ಒಳ್ಳೆಯ ಸ್ನೇಹಿತರು. ಅವರಿಗೆ ಬಹುಶಃ ಬೆಳಗಾವಿ ಉತ್ತರ ಕ್ಷೇತ್ರದ ವಿಚಾರವಾಗಿ ಬಹಳ ಗೊತ್ತಿಲ್ಲ ಅನ್ನುವುದು ನನ್ನ ಅನಿಸಿಕೆ. ಏಕೆಂದರೆ 2010ರಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಪ್ರಾರಂಭವಾಯಿತು ಆಗ ನನ್ನ ಹಿರಿಯ ಸಹೋದರರಾದ ಫಿರೋಜ್ ಸೆಟ್ ಶಾಸಕರಿದ್ದರು ಅವರು ಯೋಜನೆ ಬದ್ಧವಾಗಿ ಸ್ಮಾರ್ಟ್ ಸಿಟಿಯನ್ನು ಅನುಷ್ಠಾನ ಮಾಡುವುದಾಗಿ 450 ಕೋಟಿ ರೂಗಳ ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ನೀಲನಕ್ಷೆ ತಯಾರು ಮಾಡಿದ್ದರು.

ಆದರೆ ಆ ಯೋಜನೆಯನ್ನು ತಿರಸ್ಕರಿಸಿ ತಮ್ಮ ಮನ ಬಂದಂತೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನ ಮಾಡಿದ್ದಾರೆ. ಅದರ ಪ್ರತಿಫಲವೇ ಇವತ್ತಿನ ಈ ಕಾಮಗಾರಿಗಳನ್ನು ನಾವು ನೋಡ್ತಾ ಇದ್ದೀವಿ , ಅನದಿಕೃತ ಕಾಮಗಾರಿಗಳು, ರಸ್ತೆಗಳು ಹಾಗೂ ಚರಂಡಿಗಳು ಇವೆಲ್ಲವೂ ಎದ್ವಾ ತದ್ವಾವಾಗಿ ಕಾಮಗಾರಿ ಮಾಡಿರುವುದರಿಂದಾಗಿ ಸಮಸ್ಯೆ ಎದುರಾಗುತ್ತಿದೆ ಆದರೂ ಇದಕ್ಕೆ ನಾವು ಸರಿಯಾಗಿ ಕಾರ್ಯನಿರ್ವಹಿಸಲು ಪ್ರಯತ್ನ ಮಾಡುತ್ತಾ ಇದ್ದೇವೆ.

ಪ್ರಶ್ನೆ3: ಪ್ರತಿ ವರ್ಷವೂ ಮಹಾನಗರ ಪಾಲಿಕೆಗೆ ಅಭಿವೃದ್ಧಿಗೋಸ್ಕರ ಒಂದು 100 ಕೋಟಿ ಅನುದಾನ ಬಿಡುಗಡೆವಾಗುತ್ತಿತ್ತು ಆದರೆ ಈಗ ಏಕೆ ಆಗುತ್ತಿಲ್ಲ?

ಆ.ಸೆ: ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ಪಿಡಬ್ಲ್ಯೂಡಿ ಇಲಾಖೆಯಿಂದ ಬೆಳಗಾವಿ ಫ್ಲವರ್ ಕಾಮಗಾರಿಗೆ 400 ಕೋಟಿ ರೂಪಾಯಿ ಮಂಜೂರಾಗಿದೆ. ಜೊತೆಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಲ್ಲಾ ಇಲಾಖೆಗಳ ಕಚೇರಿಗಳನ್ನು ನಿರ್ಮಾಣ ಮಾಡಲು 

200 ಕೋಟಿ ರೂಪಾಯಿ ಮಂಜುರಾಗಿದೆ. ಶೀಘ್ರದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಹೊಸ ರೂಪರೇಷೆ ತಯಾರವಾಗಲಿದೆ. ಜೊತೆಗೆ ಬೆಳಗಾವಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು ಅದನ್ನು ನಿರ್ವಹಿಸಲು ಕೂಡ ಅನುದಾನ ಬಿಡುಗಡೆಯಾಗಿದೆ. ಬೆಳಗಾವಿ ಜಿಲ್ಲಾ ಕ್ರೀಡಾಂಗಣಕ್ಕೆ 50 ಕೋಟಿ ರೂಪಾಯಿ ಮಂಜುರಾಗಿದ್ದು ಒಟ್ಟಾರೆ ಸಾವಿರ ಕೋಟಿ ರೂಪಾಯಿ ಅನುದಾನ ನನ್ನ ಕ್ಷೇತ್ರದಲ್ಲಿ ಈ ವರ್ಷ ಕಾಮಗಾರಿ ಪ್ರಾರಂಭವಾಗಲಿದೆ.

ಪ್ರಶ್ನೆ4: ಬೆಳಗಾವಿ ನಗರ ಪ್ರದೇಶಗಳಲ್ಲಿ ಗ್ಯಾಸ್ ಸಿಲೆಂಡರ್ ಅವಗಡಗಳು ಹೆಚ್ಚಾಗುತ್ತಿವೆ ಆದರೂ, ಗ್ಯಾಸ್ ಕಂಪನಿಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂದು ಸಾರ್ವಜನಿಕರ ದೂರಾಗಿದೆ ಇದಕ್ಕೆ ಜಿಲ್ಲಾ ಆಡಳಿತ ಯಾವ ಕ್ರಮ ಕೈಗೊಳ್ಳುತ್ತಿದೆ ?

ಆ.ಸೆ: ಬೆಳಗಾವಿ ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಈ ಎಲ್ಲಾ ಏಜೆನ್ಸಿಗಳು ಹಾಗೂ ಕಂಪನಿಗಳ ಸಭೆ ಕರೆದಿದ್ದಾರೆ ಇದಕ್ಕೊಂದು ಪರಿಹಾರ ಹುಡುಕುವ ನಿರೀಕ್ಷೆ ನಮಗೂ ಇದೆ.

ಪ್ರಶ್ನೆ5: 2024ರ ಚುನಾವಣೆ ಫಲಿತಾಂಶದ ಕುರಿತು ನಿಮ್ಮ ಅಭಿಪ್ರಾಯವೇನು ?

ಆ.ಸೆ: ಈ ಚುನಾವಣೆ ಫಲಿತಾಂಶ ಜಾತಿ ಧರ್ಮ ಮತ್ತು ದೋಷ ರಾಜಕಾರಣಕ್ಕೆ ಆಸ್ಪದ ನೀಡಲಿಲ್ಲ.

ಮತದಾರರು ಪ್ರಬುದ್ಧರಿದ್ದಾರೆ ಜನರು ತಮ್ಮ ಮೂಲಭೂತ ಸೌಕರ್ಯಗಳ ಮತ್ತು ಅವಶ್ಯಕತೆಗಳ ಕುರಿತು ಯೋಚನೆ ಮಾಡಿ ಮತ ಚಲಾವಣೆ ಮಾಡಿದ್ದಾರೆ. ಚುನಾವಣೆ ಯಾವ ವಿಷಯದ ಆಧಾರ ಮೇಲೆ ನಡೆಯಬೇಕೆಂಬುದು ಜನ ಸ್ಪಷ್ಟವಾಗಿ ರಾಜಕಾರಣಿಗಳಿಗೆ ತಿಳಿಸಿದ್ದಾರೆ. ಈಗಿರುವಂತ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಉದ್ಯೋಗ, ಆರೋಗ್ಯ, ಶಿಕ್ಷಣ, ಈ ವಿಷಯಗಳಿಗೆ ಪ್ರಾಮುಖ್ಯತೆ ಮತದಾರ ನೀಡಿದ್ದಾರೆ ಇದನ್ನು ನಾವು ಸ್ವಾಗತಿಸುತ್ತೇವೆ.

ಪ್ರಶ್ನೆ6: ಗ್ಯಾರಂಟಿ ಯೋಜನೆಗಳು ಈ ಚುನಾವಣೆಯಲ್ಲಿ ಪ್ರಯೋಜನವಾಗಲಿಲ್ಲ ಏಕೆ ?

ಆ.ಸೆ: 2019 ಚುನಾವಣೆಯಲ್ಲಿ ನಾವು ಕೇವಲ ಒಂದು ಸ್ಥಾನವನ್ನು ಪಡೆದುಕೊಂಡಿದ್ದೆವು ಆದರೆ ಈಗ ಒಂದ ರಿಂದ ಒಂಬತ್ತು ಸ್ಥಾನಕ್ಕೆ ನಾವು ಬಂದಿದ್ದೇವೆ ಅಂದರೆ ಈ ಗ್ಯಾರಂಟಿಗಳು ಜನರು ಸ್ವೀಕಾರ ಮಾಡಿದ್ದಾರೆ ಆದರೂ ನಾವು14 ರಿಂದ 15 ಸ್ಥಾನಗಳನ್ನು ನಿರೀಕ್ಷೆಯಲ್ಲಿದ್ದೆವು ನಮ್ಮ ನಿರೀಕ್ಷೆ ಮತ್ತು ನಮ್ಮ ಕಾರ್ಯತಂತ್ರ ವಿಫಲವಾಗಿದೆ ಎಂಬುದು ಸತ್ಯ. ಆದರೆ ಈ ಚುನಾವಣೆ ಒಟ್ಟಾರೆ ಫಲಿತಾಂಶವನ್ನು ನಾವು ನೋಡಿದರೆ ರಾಜ್ಯದಲ್ಲಿ ಕಡಿಮೆ ಅಂತರದ ಮತಗಳಿಂದ ನಾವು ಕೆಲವು ಸ್ಥಾನಗಳಲ್ಲಿ ಸೋತ್ತಿದ್ದೇವೆ.

ಪ್ರಶ್ನೆ7:ನಿಮ್ಮ ಪಕ್ಷದ ಕೆಲವು ಶಾಸಕರುಗಳು ಗ್ಯಾರಂಟಿಗಳ ಕುರಿತು ಅಪಸ್ವರ ಎತ್ತುತ್ತಿದ್ದಾರೆ ನೀವು ಏನಂತೀರಿ ?

ಆ.ಸೆ: ಗ್ಯಾರಂಟಿಗಳು ಬಡವರ ಭರವಸೆಗಳಾಗಿದ್ದಾವೆ. ಅವರ ಜೀವನ ಮಟ್ಟ ಸುಧಾರಣೆವಾಗುತ್ತಿದೆ. ನಮ್ಮ ನಾಯಕರಾದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ 

ಡಿ ಕೆ ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತಾರೆ ಇದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಇದು ಬಡವರಿಗಾಗಿ ರೂಪಿಸಿರುವ ಯೋಜನೆಗಳು ಇದು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯಬೇಕೆನ್ನುವುದು ನನ್ನ ಆಸೆ

ಪ್ರಶ್ನೆ: 8:ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ತರೆಯ ಮರೆಯ ಕಸರತ್ ಮಾಡುತ್ತಾ ಇದಿಯಾ ?

ಆ.ಸೆ: ಜನರು ನಮಗೆ ಒಂದು ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ ನಾವು ಜವಾಬ್ದಾರಿತವಾದ ವಿರೋಧ ಪಕ್ಷದವರಾಗಿದ್ದೇವೆ ದೇಶದ ಜನರ ಸಮಸ್ಯೆಗಳನ್ನು ಸದನದಲ್ಲಿ ಪ್ರಶ್ನೆ ಮಾಡುತ್ತೇವೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವ ಯಾವುದೇ ಪ್ರಸ್ತಾವನೆ ಅಥವಾ ಅವಕಾಶ ನಮ್ಮ ಮುಂದೆ ಇಲ್ಲ ಮುಂದಿನ ರಾಜಕೀಯ ತಿರುವುಗಳನ್ನು ನಾವು ಹೀಗೆ ಹೇಳಲು ಸಾಧ್ಯವಿಲ್ಲ....

 ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್ (ರಾಜು) ಸೆಟ್ ತಮ್ಮ ಸರ್ಕಾರದ ಸಾಧನೆ ಹಾಗೂ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕುರಿತಾಗಿ ಸಮಗ್ರವಾದ ಚರ್ಚೆ ಇದಾಗಿತ್ತು. ಪಂಚಾಯತ್ ಸ್ವರಾಜ್ ಸಮಾಚಾರ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳ ಕಾರ್ಯವೈಖರಿಗಳ ಕುರಿತು ತಮ್ಮ ಮುಂದೆ ವಿಭಿನ್ನವಾಗಿ ಮಂಡಿಸಲಿದೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರ ರಾಜು ಆಸಿಫ್ ಸೆಟ್ ಅವರ ಜೊತೆಗಿನ ಸಂದರ್ಶನ ಪಂಚಾಯತ್ ಸ್ವರಾಜ್ ಸಮಾಚಾರ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾಗಿದೆ.

Google News Join Facebook Live 24/7 Help Desk

Tags: