ರಾಮೋಜಿ ಫಿಲ್ಮ್​ ಸಿಟಿ ಸ್ಥಾಪಕ ರಾಮೋಜಿ ರಾವ್ ನಿಧನ; ಸಂತಾಪ ಕೋರಿದ ಚಿತ್ರರಂಗ

Jun 8, 2024 - 09:14
 37
Google  News Join WhatsApp Join Telegram View ePaper

ರಾಮೋಜಿ ಫಿಲ್ಮ್​ ಸಿಟಿ ಸ್ಥಾಪಕ ರಾಮೋಜಿ ರಾವ್ ನಿಧನ; ಸಂತಾಪ ಕೋರಿದ ಚಿತ್ರರಂಗ

Panchayat Swaraj Samachar News Desk.

ರಾಮೋಜಿ ಫಿಲ್ಮ್​ ಸಿಟಿ  ನಿರ್ಮಿಸಿದ್ದ ರಾಮೋಜಿ ರಾವ್ ಅವರು ಇಂದು (ಜೂನ್ 8) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಅವರ ನಿಧನ ವಾರ್ತೆ ಅನೇಕರಿಗೆ ದುಃಖ ತಂದಿದೆ. ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಇವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ರಾಮೋಜಿ ಫಿಲ್ಮ್​ ಸಿಟಿಯಲ್ಲಿ ‘ಬಾಹುಬಲಿ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳ ಶೂಟಿಂಗ್ ಆಗಿದೆ. 1996ರಲ್ಲಿ ಇದನ್ನು ರಾಮೋಜಿ ರಾವ್ ಸ್ಥಾಪಿಸಿದರು. ಹೈದರಾಬಾದ್​ನಲ್ಲಿರುವ ಈ ಪ್ರದೇಶ 1,666 ಎಕರೆ ಪ್ರದೇಶದಲ್ಲಿ ಇದೆ. ವಿಶ್ವದಲ್ಲೇ ಇದು ಅತಿ ದೊಡ್ಡ ಸ್ಟುಡಿಯೋ ಎನ್ನುವ ಖ್ಯಾತಿ ಇದೆ. ಇದು ವಿಶ್ವ ದಾಖಲೆ ಪಟ್ಟಿಯಲ್ಲೂ ಇದೆ. ರಾಮೋಜಿ ರಾವ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಮೋಜಿ ರಾವ್ ಅವರು ಜನಿಸಿದ್ದು 1936ರಲ್ಲಿ. 1984ರಲ್ಲಿ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದರು. 2015ರವರೆಗೂ ಅವರು ಸಿನಿಮಾಗಳನ್ನು ನಿರ್ಮಿಸುತ್ತಿದ್ದರು. ಆ ಬಳಿಕ ಅವರು ನಿರ್ಮಾಣದಿಂದ ದೂರವೇ ಇದ್ದರು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕನ್ನಡದ ಹಲವು ಸಿನಿಮಾಗೆ ಸೆಟ್​ ಹಾಕಲಾಗಿತ್ತು.

ತೆಲುಗಿನ ‘ಬಾಹುಬಲಿ’, ಬೆಂಗಾಲ್ ಟೈಗರ್, ಗಬ್ಬರ್ ಸಿಂಗ್, ಹನುಮಾನ್, ಕಲ್ಕಿ 2898 ಎಡಿ, ಪುಷ್ಪ, ಆರ್​ಆರ್​ಆರ್, ಹಿಂದಿಯ ಚೆನ್ನೈ ಎಕ್ಸ್​ಪ್ರೆಸ್, ಕನ್ನಡದ ಜಾಗ್ವಾರ್, ಕೆಜಿಎಫ್ 2, ರಾಜಕುಮಾರ, ತಮಿಳಿನ ಲಿಯೋ ಸೇರಿ ಅನೇಕ ಸಿನಿಮಾಗಳು ಇಲ್ಲಿ ಶೂಟ್ ಆಗಿವೆ.

Google News Join Facebook Live 24/7 Help Desk

Tags: