ಬೆಂಗಳೂರು: ಯುವತಿಯೊಂದಿಗೆ ಚಾಟ್ ಮಾಡಿದ್ದಕ್ಕೆ ಪ್ರಿಯಕರನಿಂದ ಆಕೆಯ ಗೆಳೆಯನ ಮೇಲೆ ಹಲ್ಲೆ

May 1, 2024 - 10:43
 87
Google  News Join WhatsApp Join Telegram View ePaper

ಬೆಂಗಳೂರು: ಯುವತಿಯೊಂದಿಗೆ ಚಾಟ್ ಮಾಡಿದ್ದಕ್ಕೆ ಪ್ರಿಯಕರನಿಂದ ಆಕೆಯ ಗೆಳೆಯನ ಮೇಲೆ ಹಲ್ಲೆ

Panchayat Swaraj Samachar News Desk.

ಬೆಂಗಳೂರು: ತನ್ನ ಪ್ರಿಯತಮೆ ಜೊತೆ ಗೆಳತನ ಬೆಳಸಿದ್ದಕ್ಕೆ ಯುವಕನ ಲಾಂಗಿನಿಂದ ಹಲ್ಲೆ ಮಾಡಿರುವ ಘಟನೆ ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್ನಲ್ಲಿ ನಡೆದಿದೆ. ಹರ್ಷಿತ್ ಹಲ್ಲೆಗೊಳಗಾದ ಯುವಕ. ಶಶಾಂಕ್ ಹಾಗೂ ಚಂದನ್ ಹಲ್ಲೆ ಮಾಡಿದ ಆರೋಪಿಗಳು. ಆರೋಪಿಗಳನ್ನು ಶಂಕರಪುರ ಠಾಣೆ ಪೊಲೀಸರು ಬಂದಿಸಿದ್ದಾರೆ.

ಬಿಕಾಂ ಪದವೀಧರನಾಗಿದ್ದು, ತಂದೆಯ ಫ್ಲವರ್ ಡೆಕೊರೇಷನ್ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಫ್ಲವರ್ ಡೆಕೊರೇಷನ್ ಅಂಗಡಿ ಕಟ್ಟಡದಲ್ಲೇ ಒಂದು ಡಯೋಗ್ನಾಸ್ಟಿಕ್ ಸೆಂಟರ್ ಇದೆ. ಈ ಡಗೋಗ್ನಾಸ್ಟಿಕ್ ಸೆಂಟರ್ನಲ್ಲಿ ಓರ್ವ ಯುವತಿ ಕೆಲಸ ಮಾಡುತ್ತಿದ್ದಾಳೆ. ಅದು ಹೇಗೋ ಯುವತಿ ಮತ್ತು ಹರ್ಷಿತ್ ಮಧ್ಯೆ ಗೆಳೆತನ ಬೆಳೆದಿದೆ. ಚಾಟ್ ಮಾಡುತ್ತಿದ್ದರು. ಈ ಯುವತಿಗೆ ಪ್ರೇಮಿ ಇದ್ದು, ಆತನೆ ಆರೋಪಿ ಶಶಾಂಕ್.

ಆರೋಪಿ ಶಶಾಂಕ್ಗೆ ಈ ಇವರ ಗೆಳತನ ವಿಚಾರ ತಿಳಿದಿದೆ. ಇವರಿಬ್ಬರ ಮಧ್ಯೆ ಏನೊ ನಡಿತಿದೆ ಎಂಬ ಅನುಮಾನ ಶಶಾಂಕ್ನಲ್ಲಿ ಹುಟ್ಟಿದೆ. ಆಗ ಶಂಶಾಂಕ್ ಪ್ರೇಯಸಿಯ ಮೊಬೈಲ್ ಮಾಡಿದಾಗ ಚಾಟ್ ಮಾಡಿರುವುದು ಕಂಡಿದೆ. ಇದರಿಂದ ರೊಚ್ಚಿಗೆದ್ದ ಶಶಾಂಕ್, ಹರ್ಷಿತ್ಗೆ ಒಂದು ಗತಿ ಕಾಣಿಸಬೇಕು ಅಂತ ನಿರ್ಧರಿಸಿದನು.

ಏಪ್ರಿಲ್ 28 ರಂದು ಸ್ನೇಹಿತ ಚಂದನ್ ನನ್ನು ಕರೆಸಿಕೊಂಡು ಬಾರ್ಗೆ ಹೋಗಿ ಕುಡಿದಿದ್ದಾರೆ. ಬಳಿಕ ಪೇಪರ್ನಲ್ಲಿ ಲಾಂಗ್ ಸುತ್ತಿಕೊಂಡು ಬೈಕನಲ್ಲಿ ರಾತ್ರಿ 8.30ರ ಸುಮಾರಿಗೆ ಹರ್ಷಿತ್ನ ಅಂಗಡಿ ಬಳಿ ಬಂದಿದ್ದಾರೆ. ಬಂದವರೇ ಲಾಂಗಿನಿಂದ ಹರ್ಷಿತ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇದರಿಂದ ಹರ್ಷಿತನ ಬಲಗೈನ ಬಲಗೈನ ಹೆಬ್ಬೆರಳು ತುಂಡಾಗಿದೆ. ಎಡಗೈನ ಮುಂಗೈ ಎರಡು ತುಂಡಾಗಿದೆ. ಬೆಚ್ಚಿ‌‌‌ ಬೀಳುವಂತ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೈನಿಂದ ರಕ್ತ ಸೋರುತ್ತಿದ್ದು, ಹರ್ಷಿತ್ ಫುಟ್ ಪಾತ್ ಮೇಲೆ ಬಂದು ನಿಂತಿದ್ದಾನೆ. ಕೆಲವೇ ಹೊತ್ತಲ್ಲಿ ಫುಟ್ ಪಾತ್ ರಕ್ತದ ಕೋಡಿಯಾಗಿದೆ. ಬಳಿಕ ಹರ್ಷಿತ ತುಂಡಾದ ಬೆರಳು ಮತ್ತು ಮುಂಗೈಯನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಆಸ್ಪತ್ರೆಗೆ ಹೋಗಿದ್ದಾನೆ. ವಿಚಾರ ತಿಳಿದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶಂಕರಪುರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Google News Join Facebook Live 24/7 Help Desk

Tags: