ಪ್ರಭಾವಿ ನಾಯಕರ ಮಕ್ಕಳಿಗೆ ವಿಧಾನ ಪರಿಷತ್ ಸ್ಥಾನವಿಲ್ಲ ಲಕ್ಷ್ಮಣ್ ರಾವ್ ಚಿಂಗಳೆ

Jun 1, 2024 - 10:32
 42
Google  News Join WhatsApp Join Telegram View ePaper

ಪ್ರಭಾವಿ ನಾಯಕರ ಮಕ್ಕಳಿಗೆ ವಿಧಾನ ಪರಿಷತ್ ಸ್ಥಾನವಿಲ್ಲ ಲಕ್ಷ್ಮಣ್ ರಾವ್ ಚಿಂಗಳೆ

Panchayat Swaraj Samachar News Desk.

ವಿಧಾನ ಪರಿಷತ್ ಚುನಾವಣೆಗೆ ಹಲವಾರು ಜನ ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ ಏಳು ಸ್ಥಾನಗಳಿಗೆ 70 ಜನ ಆಕಾಂಕ್ಷಿ ಪತ್ರವನ್ನು ಸಲ್ಲಿಸಿದ್ದಾರೆ . ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ ವಿಧಾನ ಪರಿಷತ್ ಟಿಕೆಟ್ ಇಲ್ಲ ಎಂದು ನಮ್ಮ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇರುವಂತಹ ನಾಯಕರುಗಳಿಗೂ ಕೂಡ ವಿಧಾನ ಪರಿಷತ್ತಿಗೆ ಸ್ಥಾನ ನೀಡುವುದಿಲ್ಲ ಎಂದು ಸ್ಪಷ್ಟವಾಗಿದೆ ಹೀಗಾಗಿ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಒಟ್ಟಾರೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಸಿಗುವ ನಿರೀಕ್ಷೆ ಇದೆ . ಎಂದು ಬೆಳಗಾವಿ ನಗರ ಅಭಿವೃದ್ಧಿ ಅಧ್ಯಕ್ಷರು ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಚಿಂಗಳೆ ಪಂಚಾಯತ್ ಸ್ವರಾಜ್ಯ ಸಮಾಚಾರದೊಂದಿಗೆ ಮಾತನಾಡುತ್ತಾ ತಿಳಿಸಿದರು.

 ಪ್ರಭಾವಿ ನಾಯಕರುಗಳ ಮಕ್ಕಳಿಗೆ ವಿಧಾನಪರಿಷತ್ ಸ್ಥಾನ ದೊರಕಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಇಲ್ಲಿ ಪಕ್ಷಕ್ಕಾಗಿ ದುಡಿದಿರುವಂತ ಕಾರ್ಯಕರ್ತರಿಗೆ ಮತ್ತು ಪಕ್ಷಕ್ಕೆ ತ್ಯಾಗ ಮಾಡಿದವರಿಗೆ ಈ ಬಾರಿ ಪರಿಗಣಿಸಲಾಗುವುದು ಹಾಗಾದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗನಾದ ಯತೆಂದ್ರ ಸಿದ್ದರಾಮಯ್ಯ ಅವರಿಗೆ ಈಗಾಗಲೇ ವಿಧಾನ ಪರಿಷತ್ ಸ್ಥಾನ ಬಹುತೇಕ ಖಚಿತ ಎಂದು ಹೇಳಲ್ಪಡಲಾಗುತ್ತದೆ ಕಳೆದ ಚುನಾವಣೆಯಲ್ಲಿ ತನ್ನ ಸ್ಥಾನವನ್ನು ತನ್ನ ತಂದೆಗೋಸ್ಕರ ಬಿಟ್ಟು ಕೊಟ್ಟಿದ್ದರು ಅದಕ್ಕಾಗಿ ಅವರಿಗೆ ರಾಜಕೀಯ ಸ್ಥಾನಮಾನ ನೀಡುವ ಸಲುವಾಗಿ ಪಕ್ಷದ ವರಿಷ್ಠರು ಈ ತೀರ್ಮಾನಕ್ಕೆ ಬಂದಿರಬಹುದು ಲಕ್ಷ್ಮಣ್ ರಾವ್ ಚಿಂಗಳೆಅವರಿಗೆ ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕುರುಬ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡುವ ಸಲುವಾಗಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು ಆದರೆ ಕಾರಣಾಂತರದಿಂದಾಗ ಟಿಕೆಟ್ ಕೈತಪ್ಪಿತ್ತು ಈಗ ರಾಜ್ಯಮಟ್ಟದ ನಿಗಮ ಮಂಡಲಗಳಲ್ಲಿ ಸ್ಥಾನ ದೊರಕಿಸುವುದರಲ್ಲಿ ಕೂಡ ವಿಫಲವಾದ ನಂತರ ಬೆಳಗಾವಿ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ಮಾಡಿ ಬೆಳಗಾವಿ ರಾಜಕಾರಣಕ್ಕೆ ಮಾತ್ರ ಸೀಮಿತ ಮಾಡಲಾಗಿತ್ತು. ಆದರೆ ಈಗ ವಿಧಾನಪರಿಷತ್ತಕ್ಕೆ ಅವರಿಗೆ ಸ್ಥಾನಮಾನ ನೀಡಲಾಗುವುದು ಎಂದು ಪ್ರಶ್ನಿಸಿದಾಗ ನಾನು ಆಕಾಂಕ್ಷಿ ಇರೋದು ನಿಜ ಆದರೆ ಎಲ್ಲವೂ ಅಂದುಕೊಂಡಂತೆ ನಡೆಯಬೇಕಲ್ಲ ಅದಕ್ಕಾಗಿ ಕಾದು ನೋಡಬೇಕಾಗುತ್ತದೆ ಎಂದು ಉತ್ತರಿಸುತ್ತಾ ನಮ್ಮ ನಡೆ ಕಾರ್ಯಕರ್ತರ ಕಡೆ ಎಂದು ಹೇಳಿ ಪಕ್ಷ ಸಂಘಟನೆ ನಮ್ಮ ಕೆಲಸ ಎಂದು ಹೇಳಿದರು.

Google News Join Facebook Live 24/7 Help Desk

Tags: