ಪಾರಿಶ್ವಾಡ್ ಗ್ರಾಮದಲ್ಲಿ ಜಮೀನಗಾಗಿ ಹೋರಾಟ

Jun 3, 2024 - 21:16
 124
Google  News Join WhatsApp Join Telegram View ePaper

ಪಾರಿಶ್ವಾಡ್ ಗ್ರಾಮದಲ್ಲಿ ಜಮೀನಗಾಗಿ ಹೋರಾಟ

Panchayat Swaraj Samachar News Desk.

ಪರಿಶ್ವಾಡ ಗ್ರಾಮದ ಸರ್ವೆ ನಂಬರ್ 20 ಹಾಗೂ 21 ಜಮೀನಿನ ಕುರಿತು ಗ್ರಾಮಸ್ಥರು ಹಾಗೂ ಒಂದು ಕುಟುಂಬದ ನಡುವೆ ಭೂ ವಿವಾದ ಸೃಷ್ಟಿಯಾಗಿದೆ.

ಈ ವಿಷಯದ ಕುರಿತಾಗಿ ಪಂಚಾಯತ ಸ್ವರಾಜ್ ಸಮಾಚಾರ ಜೊತೆಗೆ ಅರ್ಜಿದಾರರಾದ ಇಮ್ರಾನ್ ಅನ್ವರ್ ಸಾಬ ಮುಲ್ಲಾ ಮಾತನಾಡಿ ಇದು ಅಜ್ಜ ಮುತ್ತಜ್ಜ ಕಾಲಿನಿಂದ ಬಂದಿರುವಂತಹ ಜಮೀನು. ನಾವು ತಲತಲಾಂತರದಿಂದ ಇದನ್ನು ಕೃಷಿಗಾಗಿ ಬಳಸುತ್ತಾ ಬಂದಿದ್ದೇವೆ. ಪ್ರತಿ ವರ್ಷವೂ ಭತ್ತ ಹಾಗೂ ಇತರೆ ಬೆಳೆಗಳನ್ನು ಬೆಳೆದು ಈ ಜಮೀನಿನಲ್ಲಿ ಕೃಷಿಮಾಡುತ್ತೇವೆ ಈಗ ಜಮೀನಿನ ತಕ್ರಾರ್ ಏನಂದರೆ, ಕೆಲವು ವರ್ಷಗಳಿಂದ ಇಲ್ಲಿ ಖಾಲಿ ಇರುವ ಜಮೀನಿನಲ್ಲಿ ಗ್ರಾಮದ ಹಾಗೂ 5 ಗ್ರಾಮದ ಮುಸ್ಲಿಂ ಬಾಂಧವರು ನಮಾಜ್ ಮಾಡುತ್ತಾ ಬಂದಿದ್ದರು.

ಅದನ್ನು ನಾವು ನಮಾಜ್ ಅನುಮತಿ ನೀಡಿದ್ದು ಆದರೆ ಈಗ ಗ್ರಾಮದ ಸಮುದಾಯದ ಮುಖಂಡರುಗಳು ಈ ಜಮೀನವನ್ನು ನೀವು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದೀರಿ ಎಂದು ಆರೋಪ ಮಾಡಿ ಈ ಜಮೀನುವನ್ನು ಒತ್ತಾಯ ಪೂರಕವಾಗಿ ತಮ್ಮ ಕಡೆಯಿಂದ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.

ಈ ಜಮೀನವನ್ನು ಉಳಿಸಿಕೊಳ್ಳಲು ಕಾನೂನು ಹೋರಾವನ್ನು ನಾವು 22 ವರ್ಷಗಳಿಂದ ಬೆಳಗಾವಿ ಎಸಿ ಕೋರ್ಟ್ ನಲ್ಲಿ ದಾವೆ ಹೊಡಿದ್ದು ಬೆಳಗಾವಿ ಎಸಿ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿ ಆದೇಶ ಮಾಡಿದೆ . ಆದೇಶವೇನೆಂದರೆ ಪೀಠಿಕೆಯಲ್ಲಿ ವಿವರಿಸಿದ ಅಂಶಗಳನ್ನು ಆಧರಿಸಿ ಕ ಭೂ.ಕಂ ಕಾಯ್ದೆ 1964 ಕಲಂ 129 (4)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಪ್ರಶ್ನೀತ ಖಾನಾಪುರ ಹೋಬಳಿ ಪಾರಿಶ್ವಾಡ ಗ್ರಾಮದ ಸರ್ವೆ ನಂಬರ್ 20 ಕ್ಷೇತ್ರ ಒಂದು ಎಕರೆ ಮತ್ತು 21 ಕ್ಷೇತ್ರದ 4 ಎಕ್ರೆ 27 ಗುಂಟೆ ಪಹಣಿ ಪತ್ರಿಕೆಯಲ್ಲಿ ಅರ್ಜಿದಾರರ ಹೆಸರನ್ನು ಮಾತ್ರ ಮುಂದುವರಿಸಲು15/4/2024ರಂದು ಆದೇಶ ಮಾಡಿರುತ್ತಾರೆ .ಈ ಆದೇಶ ಪ್ರತಿ ಖಾನಾಪುರ ತಾಲೂಕಿನ ತಹಶೀಲ್ದಾರ್ ಅವರಿಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶವಾಗಿರುತ್ತದೆ ಆದರೂ ಕೂಡ ನಮಗೆ ಹಯಾತ ಮಹಮ್ಮದ್ ಗೌವಸ ಮುಲ್ಲಾ ,ಇಮಾಮಲಿ ಬುಡ್ಡೇಸಾಬ ಮುಲ್ಲಾ , ಇವರು ಹಾಗೂ ಇವರ ಜೊತೆ ಇನ್ನೂ ಜಮಾತಿನ ಕೆಲವು ಜನ ಸೇರಿ ನಮ್ಮ ಮೇಲೆ ಒತ್ತಡ ಹೇರಿ ಈ ಜಮೀನುವನ್ನು ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ . ಅದಕ್ಕಾಗಿ ನಾವು ಖಾನಾಪುರ್ ತಹಶೀಲ್ದಾರ್ ಕಚೇರಿಗೆ ಬಂದು ತಹಶೀಲ್ದಾರ್ ಅವರಿಗೆ ಈ ಪ್ರಕರಣದ ಆದಷ್ಟು ಬೇಗ ನಿವಾರಣೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅರ್ಜಿದಾರರಾದ ಶಬಾನ ಅಬ್ದುಲ್ ರಜಾಕ್ ಗಾಡಿ ವಾಲೆ, ಅಬ್ದುಲ್ ಅನ್ವರ್ ಸಾಬ್ ಮುಲ್ಲಾ ,ಇಮ್ರಾನ್ ಅನ್ವರ್ ಸಾಬ್ ಮುಲ್ಲಾ ,ಪ್ರಜಾನ್ ಅನ್ವರ್ ಸಾಬ್ ಮುಲ್ಲಾ ,ಹಸೀನಾ ಅನ್ವರ್ಸಾಬ್ ಮುಲ್ಲಾ, ಶಬಾನ ಮೊಹಮದ್ ಗವಾಸ್ ಮುಲ್ಲಾ, ಹಾಗೂ ಇತರರು ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: