ನೇಹಾ ಹತ್ಯೆ: ಸೋಷಿಯಲ್‌ ಮಿಡಿಯಾದಲ್ಲಿ ಕಿಡಗೇಡಿಗಳ ರಂಪಾಟ, ಜಸ್ಟೀಸ್ ಪಾರ್ ಲವ್ ವೈರಲ್

Apr 21, 2024 - 10:02
 185
Google  News Join WhatsApp Join Telegram View ePaper

ನೇಹಾ ಹತ್ಯೆ: ಸೋಷಿಯಲ್‌ ಮಿಡಿಯಾದಲ್ಲಿ ಕಿಡಗೇಡಿಗಳ ರಂಪಾಟ, ಜಸ್ಟೀಸ್ ಪಾರ್ ಲವ್ ವೈರಲ್

Panchayat Swaraj Samachar News Desk.

ಹುಬ್ಬಳ್ಳಿ: ನೇಹಾ ಹಿರೇಮಠ್‌ ಬರ್ಬರ ಹತ್ಯೆಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಸೋಷಿಯಲ್ ಮೀಡಿಯಾದಲ್ಲೂ ಒಂದು ಕಡೆ ಜಸ್ಟೀಸ್ ಫರ್ ನೇಹಾ ಅಭಿಯಾನ ನಡೆಯುತ್ತಿದೆ. ಮತ್ತೊಂದೆಡೆ ನೇಹಾ, ಫಯಾಜ್ ಹೆಸರಲ್ಲಿ ದಿಢೀರ್ ಅಂತ ಸೋಷಿಯಲ್‌ ಮೀಡಿಯಾ ಅಕೌಂಟ್ ಕ್ರಿಯೇಟ್ ಮಾಡಿ ಫೋಟೋಗಳನ್ನ ವೈರಲ್ ಮಾಡಲಾಗುತ್ತಿದೆ. ಕೊಲೆಯನ್ನೇ ಸಮರ್ಥಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ಆರೋಪ ಕೇಳಿ ಬಂದಿದೆ.

ಇನ್ಸ್ಟಾಗ್ರಾಮ್ನಲ್ಲಿ ಹೊಸದಾಗಿ ಅಕೌಂಟ್ ಕ್ರಿಯೇಟ್ ಮಾಡಿರುವ ಕೆಲವರು ನೇಹಾ ಫಯಾಜ್ ಟ್ರೂ ಲವ್, ಜಸ್ಟೀಸ್ ಫಾರ್ ಲವ್ ಅಂತ ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಗಳಿಂದ ಫೋಟೋ ಶೇರ್ ಮಾಡಿ ವೈರಲ್ ಆಗಿದೆ. ಈ ಫೋಟೋ ವೈರಲ್ ಆಗಿದ್ದಕ್ಕೆ ನೇಹಾ ತಂದೆ ಆಕ್ರೋಶ ಹೊರ ಹಾಕಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

ಹೀಗೆ ಹಲವು ರೀತಿಯ ಫೋಟೋ ಮತ್ತು ವಿಡಿಯೋ ವೈರಲ್ ಮಾಡಲು ಇನ್ಸ್ಟಾಗ್ರಾಮ್ನ ಕೆಲವು ಕಿಡಿಗೇಡಿಗಳು ಬಳಸಿಕೊಂಡಿದ್ದಾರೆ. ನೇಹಾ ಫಯಾಜ್ ಟ್ರೂ ಲವ್ ಅನ್ನೋ ಫೋಟೋ ವೈರಲ್ ಆದ ಬಳಿಕ ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ ಹಿಂದೂ ಕಾರ್ಯಕರ್ತರು ಇಬ್ಬರು ಆರೋಪಿಗಳನ್ನ ಹಿಡಿದು ವಿದ್ಯಾಗಿರಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಶಾದಿಕ್ ತಡಕೋಡ ಹಾಗೂ ಆದಿಲ್ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ.

Google News Join Facebook Live 24/7 Help Desk

Tags: