ನಾನು ಹೊರಗಿನವನಲ್ಲ ಎಂದು ಜನತೆ ಕಾಂಗ್ರೆಸ್ ಗೆ ಅರ್ಥ ಮಾಡಿಸಿದೆ

Jun 4, 2024 - 15:07
 33
Google  News Join WhatsApp Join Telegram View ePaper

ನಾನು ಹೊರಗಿನವನಲ್ಲ ಎಂದು ಜನತೆ ಕಾಂಗ್ರೆಸ್ ಗೆ ಅರ್ಥ ಮಾಡಿಸಿದೆ

Panchayat Swaraj Samachar News Desk.

ಬೆಳಗಾವಿ: ಹೊರಗಿನವರು ಎಂದು ಜನತೆ ಯಾವತ್ತೂ ಹೇಳಿರಲಿಲ್ಲ, ಕಾಂಗ್ರೆಸ್ ಪಕ್ಷದವರು ಹಾಗೆ ಹೇಳಿದ್ದರು ಜನತೆ ಅದಕ್ಕೆ ತಕ್ಕ ಉತ್ತರ ಕೊಟ್ಟಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಗೆಲುವಿನ ಬಳಿಕ ಬೆಳಗಾವಿಯಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ ಅವರು ಬೆಳಗಾವಿಗೆ ನಾನು ಹೊಸಬನಲ್ಲ 30 ವರ್ಷದಿಂದ ನಂಟಿದೆ.ಕೋವಿಡ್ ಸಮಯದಲ್ಲಿ ಇಲ್ಲಿ ಬಂದು ಕೆಲಸ ಮಾಡಿದ್ದೆ ಎಂದರು.

ಬೆಳಗಾವಿ ಗಂಡು ಮೆಟ್ಟಿದ ಸ್ಥಳ, ಸುರೇಶ ಅಂಗಡಿ ಮತ್ತು ಮಂಗಳಾ ಅಂಗಡಿಯವರನ್ನು ಗೆಲ್ಲಿಸಿದಂತೆ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ. ಹಣದಿಂದ ಮತದಾರರನ್ನು ಗೆಲ್ಲಲು ಸಾಧ್ಯ ಇಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಅರ್ಥ ಮಾಡಿಸಿದ್ದಾರೆ ಎಂದರು.

Google News Join Facebook Live 24/7 Help Desk

Tags: