ಘಟಪ್ರಭಾ ನದಿ ದಾಟುವ ವೇಳೆ ಅವಘಡ.. 13 ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ

Jun 9, 2024 - 12:32
 206
Google  News Join WhatsApp Join Telegram View ePaper

ಘಟಪ್ರಭಾ ನದಿ ದಾಟುವ ವೇಳೆ ಅವಘಡ.. 13 ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ

Panchayat Swaraj Samachar News Desk.

ಬೆಳಗಾವಿ: ನದಿ ದಾಟುವ ವೇಳೆ 13 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಮಗುಚಿಬಿದ್ದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಘಟಪ್ರಭಾ ನದಿ ದಾಟುವ ವೇಳೆ ಆಯತಪ್ಪಿ ನದಿಗೆ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್ನಲ್ಲಿ 13 ಜನರಿದ್ದರು. ಅದರಲ್ಲಿ 12 ಜನರು ಈಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಓರ್ವ ಕಣ್ಮರೆಯಾಗಿದ್ದಾರೆ.

13 ಜನರು ಅವರಾದಿಯಿಂದ ನಂದಗಾಂವ್ ಗೆ ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡು ಕೂಲಿ ಕೆಲಸಕ್ಕೆಂದು‌ ತೆರಳುತ್ತಿದ್ದರು. ಘಟಪ್ರಭಾ ನದಿ ದಾಟಿಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಈ ವೇಳೆ ಟ್ರೈಲರ್ ಸಮೇತ ಟ್ರ್ಯಾಕ್ಟರ್ ನೀರಿಗೆ ಮಗುಚಿ ಬಿದ್ದಿದೆ.

ಸದ್ಯ ಘಟನೆಯ ಸ್ಥಳದಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನೀರಲ್ಲಿ ಕಣ್ಮರೆಯಾಗಿರುವ ಓರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Google News Join Facebook Live 24/7 Help Desk

Tags: