ಕೊಡಗಿನಲ್ಲಿ SSLC ವಿದ್ಯಾರ್ಥಿನಿಯ ತಲೆ ಕತ್ತರಿಸಿ ಬರ್ಬರ ಕೊಲೆ!

May 10, 2024 - 12:27
 129
Google  News Join WhatsApp Join Telegram View ePaper

ಕೊಡಗಿನಲ್ಲಿ SSLC ವಿದ್ಯಾರ್ಥಿನಿಯ ತಲೆ ಕತ್ತರಿಸಿ ಬರ್ಬರ ಕೊಲೆ!

Panchayat Swaraj Samachar News Desk.

ಮಡಿಕೇರಿ: ‌ಕೊಡಗಿನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಭೀಕರ ಹತ್ಯೆಯಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಈ ಅಮಾನುಷ ಕೃತ್ಯ ನಡೆದಿದ್ದು, ವಿದ್ಯಾರ್ಥಿನಿ ತಲೆ ಕತ್ತರಿಸಿ ರುಂಡ-ಮುಂಡ ಬಿಸಾಕಿದ್ದಾರೆ.

ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಏಕೈಕ ವಿದ್ಯಾರ್ಥಿನಿಯಾಗಿದ್ದ ಮೀನಾ, ಪರೀಕ್ಷೆಯಲ್ಲಿ ಪಾಸ್ ಗುವ ಮೂಲಕ ತನ್ನ ಶಾಲೆಗೆ 100% ಫಲಿತಾಂಶ ತಂದು ಕೊಟ್ಟಿದ್ದಳು. ಬೆಳಗ್ಗೆಯಿಂದಲೂ ತಾನು ಪಾಸಾದ ಖುಷಿಯಲ್ಲಿ ಇದ್ದ ಮೀನಾ, ಶಾಲೆಯತ್ತ ಬಂದು ತೇರ್ಗಡೆಯಾದ ಖುಷಿಯಲ್ಲಿ ಮನೆಗೆ ಹೋಗುತ್ತಿದ್ದಳು. ಇದೇ ಸಂದರ್ಭದಲ್ಲಿ ಆಕೆಯನ್ನು ಅಡ್ಡಗಟ್ಟಿ ಕಿರಾತಕನೋರ್ವ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಅಪ್ರಾಪ್ತ ಬಾಲಕಿಯ ವಿವಾಹ ಮಾಡುವುದಕ್ಕೆ ಪೋಷಕರು ಸಿದ್ಧತೆ ನಡೆಸಿದ್ರು‌ ಎನ್ನಲಾಗಿದೆ. ಈ ವಿಷಯ ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಹೀಗಾಗಿ ಸೋಮವಾರಪೇಟೆ ಪೊಲೀಸರಿಂದ ಅಪ್ರಾಪ್ತ ಬಾಲಕಿಯ ಎಂಗೆಜ್‌ಮೆಂಟ್ ತಡೆಯಲಾಗಿತ್ತು ಎನ್ನಲಾಗಿದೆ. ಇಂದು ಶಾಲೆಗೆ ಹೋಗಿ ಬರುವ ವೇಳೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗಬೇಕಾಗಿದ್ದ ಯುವಕ ಹತ್ಯೆ ಮಾಡಿರುವ‌ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹತ್ಯೆ ಮಾಡಿದ ಅರೋಪಿಯ ಪತ್ತೆಗಾಗಿ ಬಲೆ ಬಿಸಿದ್ದಾರೆ.

Google News Join Facebook Live 24/7 Help Desk

Tags: