ಕನಸು ಬೆನ್ನತ್ತಲು ಕೆಲವೊಂದು ತ್ಯಾಗ ಆಗಲೇಬೇಕು; ಚಂದನ್-ನಿವೇದಿತಾ ವಿಚ್ಛೇದನದ ಬಗ್ಗೆ ವಕೀಲರ ಮಾತು

Jun 8, 2024 - 12:48
 59
Google  News Join WhatsApp Join Telegram View ePaper

ಕನಸು ಬೆನ್ನತ್ತಲು ಕೆಲವೊಂದು ತ್ಯಾಗ ಆಗಲೇಬೇಕು; ಚಂದನ್-ನಿವೇದಿತಾ ವಿಚ್ಛೇದನದ ಬಗ್ಗೆ ವಕೀಲರ ಮಾತು

Panchayat Swaraj Samachar News Desk.

ಚಂದನ್ ಹಾಗೂ ನಿವೇದಿತಾ ಗೌಡ ಅವರು ವಿಚ್ಛೇದನ ಪಡೆದಿದ್ದು ಏಕೆ ಎನ್ನುವ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಸರಿಯಾದ ಕಾರಣವನ್ನು ಯಾರೂ ರಿವೀಲ್ ಮಾಡಿಲ್ಲ. ಈಗ ಚಂದನ್ ಹಾಗೂ ನಿವೇದಿತಾ ಪರ ವಕೀಲರಾದ ಅನಿತಾ ಅವರು ಇವರ ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಒಂದು ವರ್ಷಗಳ ಹಿಂದೆಯೇ ಇವರು ವಿಚ್ಛೇದನಕ್ಕೆ ನಿರ್ಧರಿಸಿದ್ದರು. ಈಗ ಇವರು ಬೇರೆ ಆಗಿದ್ದಾರೆ.

‘ಮಾಧ್ಯಮಗಳಲ್ಲಿ ಚಂದನ್ ಹಾಗೂ ನಿವೇದಿತಾ ಬಗ್ಗೆ ತಪ್ಪಾಗಿ ತೋರಿಸಲಾಗುತ್ತಿದೆ. ಈ ಕಾರಣಕ್ಕೆ ನಾನು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದೇನೆ. ಮೊದಲು ವಿಚ್ಛೇದನ ಅರ್ಜಿ ಸಲ್ಲಿಸಿದ ಬಳಿಕ ಆರು ತಿಂಗಳ ಸಮಯಾವಕಾಶ ಇರುತ್ತಿತ್ತು. ಈಗ ಹಾಗಿಲ್ಲ. ತಕ್ಷಣಕ್ಕೆ ವಿಚ್ಛೇದನ ಪಡೆಯಬಹುದು. ಇಬ್ಬರೂ ಮೆಚ್ಯೂರ್ ಆಗಿದ್ದಾರೆ. ಇಬ್ಬರೂ ಬೆಸ್ಟ್ ಹ್ಯೂಮನ್ ಬೀಯಿಂಗ್ಸ್. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡೋದು ಸರಿ ಅಲ್ಲ’ ಎಂದಿದ್ದಾರೆ ಅನಿತಾ.

‘ಒಂದು ವರ್ಷದ ಹಿಂದೆಯೇ ಅವರು ವಿಚ್ಛೇದನಕ್ಕೆ ನಿರ್ಧರಿಸಿದ್ದರು. ದೊಡ್ಡವರು ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ, ಅದು ಆಗಿಲ್ಲ. ಇಬ್ಬರೂ ಹ್ಯಾಪಿ ಆಗಿದ್ದಾರೆ. ಇಬ್ಬರೂ ತೀರ್ಮಾನ ಮಾಡಿಕೊಂಡಿದ್ದರು. ಮಗು ಹೊಂದಲು ನಿವೇದಿತಾ ಒಪ್ಪಿಲ್ಲ, ಇದಕ್ಕೆ ವಿಚ್ಛೇದನ ಪಡೆದರು ಅನ್ನೋದು ಸುಳ್ಳು. ವಿಚ್ಛೇದನ ಪಡೆಯಲು ದೊಡ್ಡ ಮನಸ್ತಾಪಲೇ ಆಗಬೇಕಿಲ್ಲ. ಚಿಕ್ಕ ವಿಷಯಕ್ಕೂ ಭಿನ್ನಾಭಿಪ್ರಾಯ ಬರಬಹುದು. ಇಬ್ಬರ ಆಲೋಚನೆ ಬೇರೆ ಇದೆ. ಒಬ್ಬರಿಗೊಬ್ಬರು ತೆಗೆದುಕೊಂಡ ನಿರ್ಧಾರವನ್ನು ಗೌರವಿಸುತ್ತಾರೆ. ಕನಸುಗಳನ್ನು ಬೆನ್ನತ್ತಬೇಕು ಎಂದರೆ ಕೆಲವು ತ್ಯಾಗ ಮಾಡಲೇಬೇಕು’ ಎಂದಿದ್ದಾರೆ ಅನಿತಾ.

Google News Join Facebook Live 24/7 Help Desk

Tags: