ಈ ಭಾರಿಯ ಆಟ ಮುಗಿಸಿದ RCB, ಪಂದ್ಯ ಸೋತರೂ ಪ್ಯಾನ್ಸ್ ಹೃದಯ ಗೆದ್ದ ಕೆಂಪು ಪಡೆ

May 22, 2024 - 23:42
 38
Google  News Join WhatsApp Join Telegram View ePaper

ಈ ಭಾರಿಯ ಆಟ ಮುಗಿಸಿದ RCB, ಪಂದ್ಯ ಸೋತರೂ ಪ್ಯಾನ್ಸ್ ಹೃದಯ ಗೆದ್ದ ಕೆಂಪು ಪಡೆ

Panchayat Swaraj Samachar News Desk.

ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಕ್ವಾಲಿಫೈಯರ್-2 ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇತ್ತ ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದ್ದ ಆರ್ಸಿಬಿ ಪಯಣ ಇಲ್ಲಿಗೆ ಅಂತ್ಯಗೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ಉತ್ತರವಾಗಿ ರಾಜಸ್ಥಾನ 19 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಕ್ವಾಲಿಫೈಯರ್-2 ತಲುಪಿರುವ ರಾಜಸ್ಥಾನ ತಂಡ ಇದೀಗ ಮೇ 24 ರಂದು ಮತ್ತೊಂದು ನಾಕೌಟ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ಗೆಲ್ಲುವ ತಂಡ ಮೇ 26 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫೈನಲ್‌ನಲ್ಲಿ ಆಡಲಿದೆ. ಬೆಂಗಳೂರಿನ ಆಟಗಾರರು ದಿನೇಶ್ ಕಾರ್ತಿಕ್ ಅವರನ್ನು ಅಪ್ಪಿಕೊಂಡ ರೀತಿ, ಇದು ಐಪಿಎಲ್‌ನಲ್ಲಿ ಕಾರ್ತಿಕ್ ಅವರ ಕೊನೆಯ ಪಂದ್ಯ ಎಂದು ಊಹಿಸಲಾಗುತ್ತಿದೆ. ಸಿಎಸ್‌ಕೆ ವಿರುದ್ಧದ ಪಂದ್ಯವು ತನ್ನ ಐಪಿಎಲ್ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಕಾರ್ತಿಕ್ ಸಿಎಸ್‌ಕೆಯನ್ನು ಸೋಲಿಸಿದ ನಂತರ ಈ ಹಿಂದೆ ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಾರ್ತಿಕ್ ಅವರ ವೃತ್ತಿಜೀವನ ಮುಗಿದಿದೆ ಎಂದು ಪರಿಗಣಿಸಲಾಗಿದೆ.

Google News Join Facebook Live 24/7 Help Desk

Tags: