ಇದು ಅತಿದೊಡ್ಡ ಪ್ರಜಾಪ್ರಭುತ್ವ ಜಯ: ಮೋದಿ

Jun 4, 2024 - 21:00
 43
Google  News Join WhatsApp Join Telegram View ePaper

ಇದು ಅತಿದೊಡ್ಡ ಪ್ರಜಾಪ್ರಭುತ್ವ ಜಯ: ಮೋದಿ

Panchayat Swaraj Samachar News Desk.

ದೇಶದ ಜನರಿಗೆ ನಾನು ಆಭಾರಿಯಾಗಿದ್ದೇನೆ. ಈ ಜಯ ಲೋಕತಂತ್ರದ ಜಯ. ಇದು ಸಬ್ಕಾ ಸಾಥ್, ಸಬ್ಕಾ ವಿಕಾಸದ ಜಯ ಎಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ದೆಹಲಿಯ ಬಿಜೆಪಿ ಕಚೇರಿಗೆ ನರೇಂದ್ರ ಮೋದಿ ಆಗಮಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ನಿಮ್ಮ ಈ ಪ್ರೀತಿ, ಈ ಆರ್ಶಿವಾದಕ್ಕಾಗಿ ನಾನು ದೇಶದ ಜನರಿಗೆ ಖುಣಿಯಾಗಿದ್ದೇನೆ. ಇಂದು ಮಂಗಳಕರ ದಿನ. ಈ ಪಾವನ ದಿನದಂದು ಮೂರನೇ ಬಾರಿ ಸರ್ಕಾರ ರಚನೆಗೆ ಸಿದ್ದವಾಗಿದೆ. ನಾವು ಎಲ್ಲರೂ ಜನರಿಗೆ ಆಭಾರಿಯಾಗಿದ್ದೇವೆ. ದೇಶದ ಜನರು ಬಿಜೆಪಿ ಮೇಲೆ ಎನ್‌ಡಿಎ ಮೇಲೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವಿಜಯ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಜಯ ಎಂದು ಹೇಳಿದ್ದಾರೆ.

ಸತತ 3ನೇ ಬಾರಿಗೆ ಮತದಾರರು ಎನ್‌ಡಿಎಗೆ ಆರ್ಶೀವಾದ ಮಾಡಿದ್ದಾರೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ಧನ್ಯವಾದ. ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ. ವಿಶ್ವದ ಅತ್ಯಂತ ದೊಡ್ಡ ಚುನಾವಣೆ ಮುಕ್ತಾಯವಾಗಿದೆ ಎಂದು ಮೋದಿ ಹೇಳಿದ್ದಾರೆ.

ಚುನಾವಣಾ ಆಯೋಗ ಯಶಸ್ವಿಯಾಗಿ ಚುನಾವಣೆ ನಡೆಸಿದೆ. 100 ಕೋಟಿ ಮತದಾರರು, 11 ಲಕ್ಷ ಮತಗಟ್ಟೆಗಳು, 1.5 ಕೋಟಿ ಚುನಾವಣಾಧಿಕಾರಿಗಳು, 50 ಲಕ್ಷ ಇವಿಎಂಗಳು, ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು, ಭದ್ರತಾ ಸಿಬ್ಬಂದಿ ಆದರ್ಶಪ್ರಾಯವಾಗಿ ಕಾರ್ಯನಿರ್ವಹಿಸಿದರು.

ಪ್ರತಿಯೊಬ್ಬ ಭಾರತೀಯನು ಚುನಾವಣಾ ವ್ಯವಸ್ಥೆ ಮತ್ತು ಅದರ ವಿಶ್ವಾಸಾರ್ಹತೆಯ ಬಗ್ಗೆ ಹೆಮ್ಮೆಪಡುತ್ತಾನೆ. ಇದರ ದಕ್ಷತೆಯು ಪ್ರಪಂಚದ ಬೇರೆಲ್ಲಿಯೂ ಹೊಂದಿಕೆಯಾಗುವುದಿಲ್ಲ. ನಾನು ಇನ್ ಫ್ಲೂಯೆನ್ಸರ್ಸ್ಗಳಿಗೆ ಹೇಳಲು ಬಯಸುವ ವಿಷಯ ಏನೆಂದರೆ, ಇದು ಹೆಮ್ಮೆಯ ವಿಷಯ. ಇದು ಭಾರತದ ಖ್ಯಾತಿಯನ್ನು ಹೆಚ್ಚಿಸುತ್ತದೆ. ಇದನ್ನು ಜನರ ಹೆಮ್ಮೆಯಿಂದ ಪ್ರಪಂಚದ ಮುಂದೆ ಪ್ರಸ್ತುತಪಡಿಸಬೇಕು ಎಂದು ಮೋದಿ ಹೇಳಿದ್ದಾರೆ.

ಈ ಬಾರಿ ಮತ ಚಲಾಯಿಸಿದ ಜನರು ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳ ಜನಸಂಖ್ಯೆಗಿಂತ ಹೆಚ್ಚು. ಜಮ್ಮು ಮತ್ತು ಕಾಶ್ಮೀರದಲ್ಲಿ ಲ್ಲಿ ದಾಖಲೆಯ ಮತದಾನವಾಗಿದ್ದು ಭಾರತವನ್ನು ಟೀಕಿಸುವ ಜನರಿಗೆ ಅವರ ತಕ್ಕ ಉತ್ತರ ನೀಡಿದ್ದಾರೆ.

Google News Join Facebook Live 24/7 Help Desk

Tags: