ಆರ್ಸಿಬಿ ಹೃದಯವಿದ್ರಾವಕ ಸೋಲಿನೊಂದಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ

May 23, 2024 - 09:22
 47
Google  News Join WhatsApp Join Telegram View ePaper

ಆರ್ಸಿಬಿ ಹೃದಯವಿದ್ರಾವಕ ಸೋಲಿನೊಂದಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ

Panchayat Swaraj Samachar News Desk.

ಅಹಮದಾಬಾದ್‌: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್‌ ದಿನೇಶ್ ಕಾರ್ತಿಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್  ವಿರುದ್ಧದ 17ನೇ ಆವೃತ್ತಿ ಐಪಿಎಲ್ ಎಲಿಮಿನೇಟರ್ ಪಂದ್ಯವೇ ಡಿಕೆ ಪಾಲಿಗೆ ಕೊನೆಯದ್ದಾಗಿದೆ. ಆರ್ಸಿಬಿ ಹೃದಯವಿದ್ರಾವಕ ಸೋಲಿನೊಂದಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ ಹೇಳಿದ್ದಾರೆ.

ಪಂದ್ಯ ಮುಗಿಯುತ್ತಿದ್ದಂತೆ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ ತೆಗೆದು ಪ್ರೇಕ್ಷಕರತ್ತ ಕೈಬೀಸಿ ಧನ್ಯವಾದ ಅರ್ಪಿಸಿದ ದಿನೇಶ್ ಕಾರ್ತಿಕ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಂದ ಭಾವನಾತ್ಮಕ ಗೌರವ ಪಡೆದುಕೊಂಡಿದ್ದಾರೆ. ಎದುರಾಳಿ ಆಟಗಾರರು ಹಸ್ತಲಾಘವ ಮಾಡುವ ಸಂದರ್ಭದಲ್ಲೂ ಡಿಕೆ ತೀವ್ರ ಭಾವುಕರಾಗಿದ್ದು ಕಂಡುಬಂದಿತ್ತು. ಮೈದಾನ ತೊರೆಯುವವರೆಗೂ ದಿನೇಶ್‌ ಕಾರ್ತಿಕ್‌ ಅವರ ಕಣ್ಣಲ್ಲಿ ನೀರು ತುಂಬಿತ್ತು. ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಬೀಳ್ಕೊಡುಗೆ ನೀಡಿದರು. ಆದ್ರೆ ದಿನೇಶ್ ಕಾರ್ತಿಕ್ ಅಧಿಕೃತವಾಗಿ ಘೋಷಣೆ ಹೊರಡಿಸುವುದೊಂದೇ ಬಾಕಿಯಿದೆ.

Google News Join Facebook Live 24/7 Help Desk

Tags: