ಆರ್‌ಸಿಬಿಗೆ ಇಂದು ನಿರ್ಣಾಯಕ ಪಂದ್ಯ – ಗೆದ್ದರಷ್ಟೇ ಪ್ಲೇ-ಆಫ್‌ ಕನಸು ಜೀವಂತ

May 12, 2024 - 13:29
 62
Google  News Join WhatsApp Join Telegram View ePaper

ಆರ್‌ಸಿಬಿಗೆ ಇಂದು ನಿರ್ಣಾಯಕ ಪಂದ್ಯ – ಗೆದ್ದರಷ್ಟೇ ಪ್ಲೇ-ಆಫ್‌ ಕನಸು ಜೀವಂತ

Panchayat Swaraj Samachar News Desk.

ಬೆಂಗಳೂರು: ತವರಿನಲ್ಲಿ ಇಂದು (ಭಾನುವಾರ) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಿರ್ಣಾಯಕ ಕದನಕ್ಕೆ ಸಜ್ಜಾಗಿದೆ. ಈ ಪಂದ್ಯ ಗೆದ್ದರಷ್ಟೇ ಆರ್‌ಸಿಬಿಗೆ ಪ್ಲೇ-ಆಫ್‌ಗೇರುವ ಕನಸು ಜೀವಂತವಾಗಿರಲಿದೆ. ಒಂದರ್ಥದಲ್ಲಿ ಇದು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುವ ಪಂದ್ಯದಲ್ಲಿ ಒಂದು ವೇಳೆ ಆರ್‌ಸಿಬಿ ಸೋತರೆ ನಾಕೌಟ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ಗೂ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಸೋತರೆ ನಾಕೌಟ್‌ ಹಾದಿ ಕಠಿಣವಾಗಲಿದೆ. 

ಆರ್‌ಸಿಬಿ ಒಟ್ಟು 12 ಪಂದ್ಯಗಳನ್ನು ಆಡಿದ್ದು, 5 ಪಂದ್ಯಗಳಲ್ಲಿ ಜಯಗಳಿಸಿದೆ. ಟೂರ್ನಿಯ ಆರಂಭಿಕ 8 ಪಂದ್ಯಗಳಲ್ಲಿ ಡು ಪ್ಲೆಸಿಸ್‌ ನಾಯಕತ್ವದ ಆರ್‌ಸಿಬಿ 7 ರಲ್ಲಿ ಸೋತಿದೆ. ಆದರೆ ಕಳೆದ 4 ಪಂದ್ಯಗಳಲ್ಲಿ ಅಭೂತಪೂರ್ವ ಪ್ರದರ್ಶನದೊಂದಿಗೆ ಜಯಭೇರಿ ಬಾರಿಸಿದೆ. ಗುಜರಾತ್‌ ವಿರುದ್ಧ 9 ವಿಕೆಟ್‌ಗಳ ಗೆಲುವು ಮತ್ತು ಪಂಜಾಬ್‌ ವಿರುದ್ಧ 60 ರನ್‌ಗಳ ಜಯ ಆರ್‌ಸಿಬಿ ತಂಡದ ರನ್‌ ನೆಟ್‌ ರೇಟನ್ನು ಹೆಚ್ಚಿಸಿರುವುದು ಪ್ಲಸ್‌ ಪಾಯಿಂಟ್‌ ಆಗಿದೆ. ಸದ್ಯ ತಂಡಕ್ಕೆ ಎರಡು ಪಂದ್ಯಗಳಿದ್ದು, ಭಾರಿ ಅಂತರದಲ್ಲಿ ಗೆಲ್ಲಬೇಕಿದೆ. ಅದೃಷ್ಟ ಖುಲಾಯಿಸಿದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಇದೆ.

ಡೆಲ್ಲಿ 12 ರಲ್ಲಿ 6 ಪಂದ್ಯಗಳನ್ನು ಗೆದ್ದಿದೆ. ತಂಡ 12 ಅಂಕ ಸಂಪಾದಿಸಿದ್ದು, ಪ್ಲೇ-ಆಫ್‌ಗೇರಲು ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಆರ್‌ಸಿಬಿ ವಿರುದ್ಧ ಇಂದು ನಡೆಯುವ ಪಂದ್ಯದಲ್ಲಿ ಸೋತರೆ ಡೆಲ್ಲಿಗೆ ಪ್ಲೇ-ಆಫ್‌ ಹಾದಿ ಇನ್ನೂ ಕಠಿಣವಾಗಲಿದೆ.

Google News Join Facebook Live 24/7 Help Desk

Tags: