ಆಂಧ್ರದಲ್ಲಿ ಜಗನ್​ಗೆ ಹೀನಾಯ ಸೋಲು; ಪವನ್​ ಕಲ್ಯಾಣ್​​, ನಾಯ್ಡು ಮೈತ್ರಿಗೆ ಭರ್ಜರಿ ಜಯ

Jun 4, 2024 - 13:07
 76
Google  News Join WhatsApp Join Telegram View ePaper

ಆಂಧ್ರದಲ್ಲಿ ಜಗನ್​ಗೆ ಹೀನಾಯ ಸೋಲು; ಪವನ್​ ಕಲ್ಯಾಣ್​​, ನಾಯ್ಡು ಮೈತ್ರಿಗೆ ಭರ್ಜರಿ ಜಯ

Panchayat Swaraj Samachar News Desk.

ಅಮರಾವತಿ: ಕರ್ನಾಟಕ ನೆರೆರಾಷ್ಟ್ರ ಆಂಧ್ರಪ್ರದೇಶದ ರಾಜಕೀಯಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಬರೋಬ್ಬರಿ 5 ವರ್ಷಗಳ ಬಳಿಕ ಜನಸೇನಾ, ಟಿಡಿಪಿ ಮತ್ತು ಜನಸೇನಾ ಮೈತ್ರಿಗೆ ಗೆಲುವಾಗಿದೆ. ಸಿಎಂ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್​ಆರ್​​ ಕಾಂಗ್ರೆಸ್​​​ಗೆ ಹೀನಾಯ ಸೋಲಾಗಿದೆ.

ಆಂಧ್ರಪ್ರದೇಶದಲ್ಲಿ ಲೋಕಸಭಾ ಜೊತೆಗೆ ವಿಧಾನಸಭಾ ಚುನಾವಣೆ ಕೂಡ ನಡೆದಿದೆ. 175 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಜನಸೇನಾ, ಟಿಡಿಪಿ ಮತ್ತು ಜನಸೇನಾ ಮೈತ್ರಿಗೆ ಭರ್ಜರಿ ಜಯ ಸಿಕ್ಕಿದೆ. ಟಿಡಿಪಿ ಬರೋಬ್ಬರಿ 130 ಕ್ಷೇತ್ರಗಳಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಪವನ್​ ಕಲ್ಯಾಣ್​ ನೇತೃತ್ವದ ಜನಸೇನಾ ಪಕ್ಷ 20 ಮತ್ತು ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವತ್ತ ಹೆಜ್ಜೆ ಹಾಕಿದೆ. ವೈಎಸ್​ಆರ್​​ ಕಾಂಗ್ರೆಸ್​ ಹೀನಾಯ ಸೋಲು ಕಂಡಿದೆ.

ಜೂನ್​​ 9ನೇ ತಾರೀಕಿನಂದು ಆಂಧ್ರಪ್ರದೇಶದ ನೂತನ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ನಟ ಪವನ್​ ಕಲ್ಯಾಣ್​ ಡಿಸಿಎಂ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

Google News Join Facebook Live 24/7 Help Desk

Tags: