ಅನಗತ್ಯ ಹೇಳಿಕೆಗಳನ್ನು ನೀಡಬೇಡಿ, ಸರಿಯಾಗಿ ಸಮಯ ಪಾಲನೆ ಮಾಡಿ: ಸಚಿವರಿಗೆ ಮೋದಿ ಪಾಠ

Jun 11, 2024 - 14:45
 18
Google  News Join WhatsApp Join Telegram View ePaper

ಅನಗತ್ಯ ಹೇಳಿಕೆಗಳನ್ನು ನೀಡಬೇಡಿ, ಸರಿಯಾಗಿ ಸಮಯ ಪಾಲನೆ ಮಾಡಿ: ಸಚಿವರಿಗೆ ಮೋದಿ ಪಾಠ

Panchayat Swaraj Samachar News Desk.

ನವದೆಹಲಿ: ಯಾವುದೇ ಅನಗತ್ಯ ಹೇಳಿಕೆಗಳನ್ನು ನೀಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಬಿನೆಟ್‌ ಸಭೆಯಲ್ಲಿ ಸಚಿವರಿಗೆ ಸೂಚಿಸಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ಮರುದಿನವಾದ ಸೋಮವಾರ ಮೋದಿ ಅವರು ತನ್ನ ಸಂಪುಟದ ಸದಸ್ಯರ ಮೊದಲ ಸಭೆ ನಡೆಸಿದರು.

ಈ ವೇಳೆ, ಯಾವುದೇ ಅನಗತ್ಯ ಸಾರ್ವಜನಿಕ ಹೇಳಿಕೆಗಳನ್ನು ನೀಡಬೇಡಿ. ಅಗತ್ಯವಿರುವಾಗ ಆಯಾ ಸಚಿವಾಲಯಗಳಿಗೆ ನೇರವಾಗಿ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಮಾತನಾಡಿ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂತ್ರಿಗಳು ಸರಿಯಾಗಿ ಸಮಯಪಾಲನೆ ಮಾಡಬೇಕು. ಇದರಿಂದ ಸಚಿವಾಲಯದ ಸಿಬ್ಬಂದಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದಂತಾಗುತ್ತದೆ. ಸಚಿವಾಲಯದ ನಿರ್ಧಾರಗಳನ್ನು, ಸಂಬಂಧಿಸಿದ ಕಡತಗಳನ್ನು ರಾಜ್ಯ ಮಂತ್ರಿ ಜೊತೆ ಹಂಚಿಕೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

ಸಚಿವ ಸಂಪುಟ ಸಭೆ ಮುಗಿದ ಕೂಡಲೇ ಖಾತೆಗಳನ್ನು ಪ್ರಕಟಿಸಲಾಗಿದೆ. ಪ್ರಮುಖ 5 ಸಚಿವಾಲಯಗಳನ್ನು ಬಿಜೆಪಿ ತನ್ನ ಬಳಿಯೇ ಇಟ್ಟುಕೊಂಡಿದೆ ಮತ್ತು ಈ ಹಿಂದೆ ನಿರ್ವಹಣೆ ಮಾಡಿದವರಿಗೆ ನೀಡಲಾಗಿದೆ.

Google News Join Facebook Live 24/7 Help Desk

Tags: