LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಧಾನಿ ಕುರ್ಚಿ ಬಳಿ ಕೈ ಮಹಿಳಾ ಸದಸ್ಯರ ಪ್ರತಿಭಟನೆಯ ವಿಡಿಯೋ ಬಿಡುಗಡೆ – ಕಿರಣ್‌ ರಿಜಿಜು ಆಕ್ರೋಶ

Advertisement
Advertisement

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್‌ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದ್ದ ವಿಡಿಯೋವನ್ನು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ ರಿಜಿಜು ಬಿಡುಗಡೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.


ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಕಿರಣ್ ರಿಜುಜು ತನ್ನ ಸಂಸದರು ಲೋಕಸಭೆಯಲ್ಲಿ ಪ್ರದರ್ಶಿಸಿದ ಅತ್ಯಂತ ಅವಮಾನಕರ ನಡವಳಿಕೆಯ ಬಗ್ಗೆ ಕಾಂಗ್ರೆಸ್‌ ಹೆಮ್ಮೆಪಡಬೇಕು. ನಾವು ನಮ್ಮ ಬಿಜೆಪಿಯ ಮಹಿಳಾ ಸಂಸದರಿಗೆ ಕಾಂಗ್ರೆಸ್ ಸಂಸದರನ್ನು ಎದುರಿಸಲು ಅವಕಾಶ ನೀಡಿದ್ದರೆ ಅದು ತುಂಬಾ ಕೊಳಕು ದೃಶ್ಯಕ್ಕೆ ಕಾರಣವಾಗುತ್ತಿತ್ತು. ಸಂಸತ್ತಿನ ಘನತೆ ಮತ್ತು ಪಾವಿತ್ರ್ಯವನ್ನು ರಕ್ಷಿಸಲು ನಾವು ಹೆಚ್ಚಿನ ಪ್ರಬುದ್ಧತೆ ಹೊಂದಿದ್ದೇವೆ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.


ಕಾಂಗ್ರೆಸ್ ಸಂಸದರ ವರ್ತನೆಯಿಂದ ಬಿಜೆಪಿ ಮತ್ತು ಎನ್‌ಡಿಎ ಸಂಸದರು ತುಂಬಾ ಸಿಟ್ಟಾಗಿದ್ದಾರೆ. ಟ್ರೆಶರಿ ಬೆಂಚ್‌ ದಾಟಿ ಪ್ರಧಾನಿ ಆಸನದ ಬಳಿ ಬಂದು ಅವರು ಪ್ರತಿಭಟಿಸಿದ್ದಾರೆ. ಕಾಂಗ್ರೆಸ್‌ನವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಹಿಳಾ ಸಂಸದರು ಪ್ರಧಾನಿಯನ್ನು ಹೆದರಿಸಿದ್ದಾರೆ ಎಂದು ಹೇಳಿಕೊಂಡು ಸಂಭ್ರಮಿಸುತ್ತಿದ್ದಾರೆ. ಆದರೆ ಇದು ಇದು ನಾಚಿಕೆಗೇಡಿನ ಸಂಗತಿ ಎಂದು ಸಿಟ್ಟು ಹೊರಹಾಕಿದ್ದಾರೆ.





ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಬೇಕಿತ್ತು. ಆದರೆ ಮೋದಿ ಭಾಷಣಕ್ಕೂ ಮೊದಲು ಮಹಿಳಾ ಕಾಂಗ್ರೆಸ್‌ ಸಂಸದರು ಮೋದಿ ಕುಳಿತುಕೊಳ್ಳುವ ಕುರ್ಚಿಯ ಮುಂದೆ ಬ್ಯಾನರ್‌ ಹಿಡಿದು ಪ್ರತಿಭಟನೆ ನಡೆಸಿದ್ದರು.


8 ಮಂದಿ ಸಂಸದರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಡಳಿತ ಪಕ್ಷದ ಸಂಸದರನ್ನು ಅಡ್ಡಗಟ್ಟಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಸ್ಪೀಕರ್‌ ಸ್ಥಾನದಲ್ಲಿ ಕುಳಿತಿದ್ದ ಸಂಧ್ಯಾ ರೈ ಅವರು ಕಲಾಪವನ್ನು ಮುಂದೂಡಿದದ್ದರು.


ವರ್ಷಾ ಗಾಯಕ್ವಾಡ್ ಮತ್ತು ಜ್ಯೋತಿಮಣಿ ಸೇರಿದಂತೆ ಪ್ರತಿಪಕ್ಷದ ಕೆಲವು ಮಹಿಳಾ ಸಂಸದರು ಕೈಯಲ್ಲಿ ಬ್ಯಾನರ್‌ ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದರು.



Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ – KPSC ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಹಣ ವಸೂಲಿ ಆರೋಪ – ಕಾಸು ಕೊಟ್ರೆ ತಪಾಸಣೆಯೆ ಇಲ್ವಂತೆ!ಸ್ಟಾಕ್‌ ಮಾರ್ಕೆಟ್‌ನಲ್ಲಿ ಲಾಸ್‌ – ಗುಂಡು ಹಾರಿಸಿಕೊಂಡು ಕೊಡಗಿನ ಯುವಕ ಆತ್ಮಹತ್ಯೆಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ಯಾಕೆ ಕೊಡಬಾರದು – ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆತನ್ನ ಪರ ತೀರ್ಪು ಕೊಡಲಿ ಅಂತ ಮಹಿಳಾ ನ್ಯಾಯಾಧೀಶರ ಚೇರ್‌ಗೆ ಮಾಟಮಂತ್ರ – ಮಹಿಳೆ ಬಂಧನಬಸ್​​ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತಿ – ಕಂಡಕ್ಟರ್ ಇರ್ಫಾನ್ ಅರೆಸ್ಟ್‌ಬೆಂಗಳೂರಿನಲ್ಲಿ ಮತ್ತೆ ತ್ರಿವಳಿ ಕೊಲೆ – ತಾಯಿ, ಅಜ್ಜಿ, ಮಾವನನ್ನು ಕೊಂದು ಪರಾರಿಯಾಗಬೇಕಿದ್ದವ ಸೂಸೈಡ್‌ಪ್ರಶಾಂತ್ ಕಿಶೋರ್ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯನ್ನು ಬಿಜೆಪಿ ದಿಢೀರ್‌ ಬದಲಾಯಿಸಿದ್ದು ಯಾಕೆ?ತೆಲಂಗಾಣದಲ್ಲಿ ಪೋಕ್ಸೋ ಆರೋಪಿಯಿಂದ ಮಾರಣಹೋಮ – ಪತ್ನಿ, ಮಕ್ಕಳು, ಸಂತ್ರಸ್ತೆ ಸೇರಿ 6 ಜನರ ಬರ್ಬರ ಹತ್ಯೆಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ – ಚಿಕ್ಕೋಡಿ ವ್ಯಾಪ್ತಿಯ 3 ಪ್ರಮುಖ ಸೇತುವೆಗಳು ಸಂಚಾರಕ್ಕೆ ಮುಕ್ತ