LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

UP Election 2027 | 50% ಸ್ಥಾನಗಳಲ್ಲಿ ಬ್ರಾಹ್ಮಣ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಬಿಎಸ್‌ಪಿ ಪ್ಲ್ಯಾನ್‌

Advertisement
Advertisement
ಲಕ್ನೋ: ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸುಮಾರು 50% ಸ್ಥಾನಗಳಲ್ಲಿ ಬ್ರಾಹ್ಮಣ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ದೊಡ್ಡ ಲೆಕ್ಕಾಚಾರವನ್ನ ಬಿಎಸ್‌ಪಿ ಹಾಕಿಕೊಂಡಿದೆ. ಪಕ್ಷದ ಅಧ್ಯಕ್ಷೆ ಮಾಯಾವತಿ ನೇತೃತ್ವದಲ್ಲಿ ಈ ರಣನೀತಿ ರೂಪಿಸಲಾಗಿದ್ದು, ಇದು ರಾಜ್ಯ ರಾಜಕೀಯದಲ್ಲಿ ಬ್ರಾಹ್ಮಣ ಸಮುದಾಯವನ್ನ ಗಮನಾರ್ಹವಾಗಿ ಆಕರ್ಷಿಸುವ ಪ್ರಯತ್ನವಾಗಿದೆ.

ಪಕ್ಷವು ಪ್ರಸ್ತುತ 403 ವಿಧಾನಸಭಾ ಕ್ಷೇತ್ರಗಳ  ಪೈಕಿ 40 ರಿಂದ 50 ಸ್ಥಾನಗಳಲ್ಲಿ ಬ್ರಾಹ್ಮಣ ಅಭ್ಯರ್ಥಿಗಳನ್ನನಿಲ್ಲಿಸುವ ಗುರಿ ಹೊಂದಿದೆ. ಈ ದಿಶೆಯಲ್ಲಿ ಮೊದಲ ಹೆಜ್ಜೆಯಾಗಿ ಜಾಲೌನ್ ಜಿಲ್ಲೆಯ ಮಾಧೌಗಢ್ ಕ್ಷೇತ್ರದಿಂದ ಆಶೀಷ್ ಪಾಂಡೆಯ್ ಅವರನ್ನ ಕ್ಷೇತ್ರ ಪ್ರಭಾರಿಯಾಗಿ ಘೋಷಿಸಲಾಗಿದೆ. ಇವರನ್ನು ನಂತರ ಅಭ್ಯರ್ಥಿಯಾಗಿ ಅಧಿಕೃತಗೊಳಿಸಲು ಯೋಜಿಸಲಾಗಿದೆ.

ಹೋಳಿ ಹಬ್ಬದ ನಂತರ ಕಾನ್ಪುರ ಮಂಡಲದ 27 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 10 ಕ್ಷೇತ್ರಗಳಲ್ಲಿ ಪ್ರಭಾರಿಗಳನ್ನ ಘೋಷಿಸುವ ಸಾಧ್ಯತೆ ಇದೆ. ಪ್ರಸ್ತುತ ಕಾನ್ಪುರ ಮಂಡಲದಲ್ಲಿ ಬಿಎಸ್‌ಪಿಗೆ (BSP) ಒಬ್ಬರೂ ಶಾಸಕರಿಲ್ಲ. ರಾಜ್ಯದಲ್ಲಿ ಬಿಎಸ್‌ಪಿಯ ಏಕೈಕ ಶಾಸಕ ಉಮಾಶಂಕರ್ ಸಿಂಗ್ ಅವರು ಬಲಿಯಾ ಜಿಲ್ಲೆಯ ರಸಡಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.





ಪಕ್ಷವು ಪ್ರತಿ ಕ್ಷೇತ್ರಕ್ಕೆ ನಾಲ್ಕು-ನಾಲ್ಕು ಸಂಭಾವ್ಯ ಅಭ್ಯರ್ಥಿಗಳ ಪ್ಯಾನಲ್ ತಯಾರಿಸಿ, ಅವರನ್ನು ಪರೀಕ್ಷಿಸಿ ಒಬ್ಬರನ್ನು ಪ್ರಭಾರಿಯನ್ನಾಗಿ ನೇಮಿಸುತ್ತಿದೆ. ನಂತರ ಆ ಕ್ಷೇತ್ರದಲ್ಲಿ ದೊಡ್ಡ ಸಮ್ಮೇಳನ ನಡೆಸಿ ಅದೇ ವ್ಯಕ್ತಿಯನ್ನ ಅಭ್ಯರ್ಥಿಯಾಗಿ ಘೋಷಿಸುವ ಯೋಜನೆ ಇದೆ. ಇದರಿಂದ ಬ್ರಾಹ್ಮಣರು, ಮುಸ್ಲಿಮರು ಮತ್ತು ದಲಿತರ ಸಂಯೋಜಿತ ಗಟ್ಟಿ ಬೆಂಬಲ ಪಡೆಯುವ ಗುರಿ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ – KPSC ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಹಣ ವಸೂಲಿ ಆರೋಪ – ಕಾಸು ಕೊಟ್ರೆ ತಪಾಸಣೆಯೆ ಇಲ್ವಂತೆ!ಸ್ಟಾಕ್‌ ಮಾರ್ಕೆಟ್‌ನಲ್ಲಿ ಲಾಸ್‌ – ಗುಂಡು ಹಾರಿಸಿಕೊಂಡು ಕೊಡಗಿನ ಯುವಕ ಆತ್ಮಹತ್ಯೆಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ಯಾಕೆ ಕೊಡಬಾರದು – ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆತನ್ನ ಪರ ತೀರ್ಪು ಕೊಡಲಿ ಅಂತ ಮಹಿಳಾ ನ್ಯಾಯಾಧೀಶರ ಚೇರ್‌ಗೆ ಮಾಟಮಂತ್ರ – ಮಹಿಳೆ ಬಂಧನಬಸ್​​ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತಿ – ಕಂಡಕ್ಟರ್ ಇರ್ಫಾನ್ ಅರೆಸ್ಟ್‌ಬೆಂಗಳೂರಿನಲ್ಲಿ ಮತ್ತೆ ತ್ರಿವಳಿ ಕೊಲೆ – ತಾಯಿ, ಅಜ್ಜಿ, ಮಾವನನ್ನು ಕೊಂದು ಪರಾರಿಯಾಗಬೇಕಿದ್ದವ ಸೂಸೈಡ್‌ಪ್ರಶಾಂತ್ ಕಿಶೋರ್ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯನ್ನು ಬಿಜೆಪಿ ದಿಢೀರ್‌ ಬದಲಾಯಿಸಿದ್ದು ಯಾಕೆ?ತೆಲಂಗಾಣದಲ್ಲಿ ಪೋಕ್ಸೋ ಆರೋಪಿಯಿಂದ ಮಾರಣಹೋಮ – ಪತ್ನಿ, ಮಕ್ಕಳು, ಸಂತ್ರಸ್ತೆ ಸೇರಿ 6 ಜನರ ಬರ್ಬರ ಹತ್ಯೆಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ – ಚಿಕ್ಕೋಡಿ ವ್ಯಾಪ್ತಿಯ 3 ಪ್ರಮುಖ ಸೇತುವೆಗಳು ಸಂಚಾರಕ್ಕೆ ಮುಕ್ತ