LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೌರಿಯ ಪೂಜೆಗೆ ಬೇಕೇ ಬೇಕು ಈ ವಿಶೇಷ ಪುಷ್ಪ – ಅದ್ಯಾವುದು ಗೊತ್ತಾ?

Advertisement

ಗಣೇಶ ಹಬ್ಬದಲ್ಲಿ  ಗಣೇಶನ ಪೂಜೆಗಿಂತ ಮೊದಲು ತಾಯಿ ಗೌರಿಯ ಪೂಜೆ ಮಾಡಲಾಗುತ್ತದೆ. ಹೆಣ್ಣುಮಕ್ಕಳು ಗೌರಿಯ ಮೂರ್ತಿಯನ್ನು ಅಲಂಕರಿಸಿ ಪೂಜಿಸುವುದು ವಾಡಿಕೆ. ಗೌರಿಯ ಪೂಜೆಗೆ ವಿಶೇಷವಾಗಿ ಗೌರಿ ಹೂವು ಬೇಕೇ ಬೇಕು.

ಕಾಡಿನಲ್ಲಿ ಬೆಳೆಯುವ ಗೌರಿ ಹೂವನ್ನು ( ಹಿರಿಯರು ಮನೆಗೆ ತರುತ್ತಾರೆ. ಎತ್ತರಕ್ಕೆ ಎಲ್ಲೆಲ್ಲೋ ಬೆಳೆಯುವ ಗೌರಿ ಹೂವು ನೋಡಲು ಬಲು ಸುಂದರವಾಗಿರುತ್ತದೆ. ಆದರೆ ಕೈಗೆಟುಕದಂತಿರುತ್ತದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಬೆಳೆಯುವ ಈ ಗಿಡದಲ್ಲಿ ಮಳೆಗಾಲದ ಅಗಸ್ಟ್-ಸೆಪ್ಟಂಬರ್, ಅಂದರೆ ಶ್ರಾವಣ-ಭಾದ್ರಪದ ಮಾಸದಲ್ಲಿ ಹೂವು ಬಿಡುತ್ತದೆ. ಕೆಂಪು ಬಣ್ಣದ ಈ ಹೂವು ಬೆಂಕಿಯ ಕೆನ್ನಾಲಗೆಯ ರೂಪದಲ್ಲೇ ಇರುತ್ತದೆ. ಆದ್ದರಿಂದ ಈ ಹೂವಿಗೆ ಅಗ್ನಿಶಿಖೆ ಎಂದು ಸಹ ಕರೆಯಲಾಗುತ್ತದೆ. 

ತುಳುನಾಡಿನಲ್ಲಿ ಗಣೇಶ ಚತುರ್ಥಿಯ ಸಮಯದಲ್ಲಿ ಮಣ್ಣಿನ ಮೂರ್ತಿ ಪೂಜೆಗೆ ಈ ದೈತ್ಯ ಬಳ್ಳಿಯ ಹೂವನ್ನು ಇಡುವುದು ಸಂಪ್ರದಾಯವಾಗಿದೆ. ಅಲ್ಲಿ ಇದನ್ನು ‘ಗೌರಿ ಪೂ’ ಎನ್ನುತ್ತಾರೆ. ಕೊಡಗಿನ ಸಾಂಪ್ರದಾಯಿಕ ‘ಕೈಲ್‌ಪೋಲ್ದ್’ ಹಬ್ಬದಲ್ಲೂ ಆಯುಧಗಳ ಪೂಜೆಗೆ ಇದನ್ನು ಬಳಸಲಾಗುತ್ತದೆ.

ಗೌರಿ ಪೂಜೆಯ ವಿಶೇಷತೆ
ಗಣೇಶ ಚತುರ್ಥಿ ಹಬ್ಬದ ಮುನ್ನಾ ದಿನವೇ ಗೌರಿ ಮೂರ್ತಿಯನ್ನು ತಂದು ಪೂಜೆಗೆ ಸಿದ್ಧ ಮಾಡಲಾಗುತ್ತದೆ. (ಹಳ್ಳಿಯ ಕಡೆಗಳಲ್ಲಿ ತುಂಬಿದ ಕಲಶದಲ್ಲಿ ನೀರು ತುಂಬಿ ಆರಾಧಿಸುತ್ತಾರೆ) ಗಣೇಶನನ್ನು ಮನೆಗೆ ತಂದು ಪೂಜೆ ಮಾಡಿದಾಗ ಸಕಾರಾತ್ಮಕ ಶಕ್ತಿ ಹೆಚ್ಚುವುದು. ಅವುಗಳಿಂದ ಉಂಟಾಗುವ ಆವರ್ತನಗಳನ್ನು ತಾಯಿ ಗೌರಿ ಮಾತ್ರ ನಿಯಂತ್ರಿಸಲು ಸಾಧ್ಯ. ಹಾಗಾಗಿ ಗಣೇಶ ಹಬ್ಬದ ಮುನ್ನಾ ದಿನ ಗೌರಿ ದೇವಿಯನ್ನು ತಂದು ಪೂಜೆ ಮಾಡಲಾಗುತ್ತದೆ.

ಗೌರಿಗೆ ಅಲಂಕಾರ
ಮಂಗಳ ಗೌರಿಗೆ ಹೊಸ ಸೀರೆ ಅಥವಾ ಬಟ್ಟೆಯಿಂದ ಸಿಂಗರಿಸಿ, ಕೈಬಳೆ, ಬಂಗಾರದ ಸರಗಳನ್ನು ತೊಡಿಸುತ್ತಾರೆ. ನಂತರ ಪರಿಮಳದ ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ. ಅರಿಶಿನ ಕುಂಕುಮವು ಅವಳಿಗೆ ಪ್ರಿಯವಾದ ವಸ್ತುವಾಗಿರುವುದರಿಂದ ಅರಿಶಿನ ಕುಂಕುಮವನ್ನು ಇಡುವುದರ ಮೂಲಕ ಅಲಂಕಾರ ಮಾಡಲಾಗುತ್ತದೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
100 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟಬಡ ರೋಗಿಗಳಿಗೆ ಸೇರಬೇಕಿದ್ದ ಔಷಧಿಗಳು ತಿಪ್ಪೆ ಪಾಲುಇಂದಿನಿಂದ 108 ಅಂಬುಲೆನ್ಸ್ ನೌಕರರ ಮುಷ್ಕರ – ಸಾರ್ವಜನಿಕರಿಗೆ ಸಮಸ್ಯೆಯಾದ್ರೆ ಹುಷಾರ್ ಎಂದ ಖಾದರ್ಮನ್ಮುಲ್ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮತ್ತೆ ಮೂವರ ಬಂಧನ, 11ಕ್ಕೇರಿದ ಆರೋಪಿಗಳ ಸಂಖ್ಯೆನಮ್ಮದು ಸೌಜನ್ಯದ ಭೇಟಿಯಷ್ಟೇ – ಸಿದ್ದರಾಮಯ್ಯವರದಕ್ಷಿಣೆ ಕಿರುಕುಳ ಆರೋಪ; ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆನವರಾತ್ರಿ ಸಂಭ್ರಮದ ನಡುವೆ ಅವಘಡ – ಭಕ್ತರ ಮೇಲೆ ಬಿದ್ದ ಬೃಹತ್ ಲೈಟ್ ಸೆಟ್ಸ್ಟೇ ತಗೋಬಾರದಿತ್ತು, ಫೈಟ್ ಮಾಡಬೇಕಿತ್ತು – ಮೈಸೂರಿನಲ್ಲಿ ಸಿದ್ದು ಭೇಟಿಯಾದ ರಮೇಶ್‌ ಜಾರಕಿಹೊಳಿಅಂಜನಾದ್ರಿ ಬೆಟ್ಟದಿಂದ ಮುಜರಾಯಿ ಇಲಾಖೆಯ ಸಿಬ್ಬಂದಿ ಹೊರಕ್ಕೆ – ಎಲ್ಲ ಕಚೇರಿಗಳಿಗೆ ಬೀಗ ಜಡಿದ ವಿದ್ಯಾದಾಸ್ ಬಾಬಾಪಂಜಾಬ್‌ನಲ್ಲಿ ಡ್ರಗ್ಸ್ ವಿರೋಧಿ ಹೋರಾಟಗಾರನ ಹತ್ಯೆ; ಆರೋಪಿ ಅರೆಸ್ಟ್, ಅಂಗಡಿ ನೆಲಸಮ