LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೇರೆ ಯಾವುದೇ ದೇಶದಲ್ಲಿ ಹೀಗೆ ನಡೆಯೋದಿಲ್ಲ – ಸತೀಶ್‌ ಜಾರಕಿಹೊಳಿ ಪರ ವಿಜಯ್‌ ಮಲ್ಯ ಬ್ಯಾಟಿಂಗ್‌

Advertisement

ನವದೆಹಲಿ: ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ  ಅವರಿಗೆ ಜಾರಿ‌ ನಿರ್ದೇಶನಾಲಯ  ಶಾಕ್‌ ಕೊಟ್ಟಿದೆ. ಜಾರಕಿಹೊಳಿ ಅವರ ಕುಟುಂಬಕ್ಕೆ ಸೇರಿದ 21 ಸ್ಥಳಗಳಲ್ಲಿ ಇಡಿ ಶೋಧಕಾರ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪ್ರಕಟಣೆ ಮೂಲಕ ಹಂಚಿಕೊಂಡಿದ್ದು, ಲೋಕೋಪಯೋಗಿ ಇಲಾಖೆಯಲ್ಲೂ ಅವ್ಯವಹಾರ ನಡೆದಿರೋದನ್ನ ಬಹಿರಂಗಪಡಿಸಿದೆ.

ಈ ಮಾಹಿತಿಯನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಉದ್ಯಮಿ ವಿಜಯ್‌ ಮಲ್ಯ , ಸತೀಶ್‌ ಜಾರಕಿಹೊಳಿ ಪರ ಬ್ಯಾಟ್‌ ಬೀಸಿದ್ದಾರೆ.

ʻಜಾರಿ ನಿರ್ದೇಶನಾಲಯ ಇದನ್ನ ದೊಡ್ಡ ಸಾಧನೆಯಂತೆ ಬಿಂಬಿಸುತ್ತಿದೆ. ಆದ್ರೆ ಯಾವುದೇ ದೋಷಾರೋಪ ಪಟ್ಟಿ ಇಲ್ಲ, ವಿಚಾರಣೆಯೂ ಇಲ್ಲ. ಸಾರ್ವಜನಿಕವಾಗಿ ಕೇವಲ ಚಾರಿತ್ರ್ಯ ಹರಣ (ವ್ಯಕ್ತಿತ್ವ ಹನನ ಎಂದರ್ಥ) ನಡೆಯುತ್ತಿದೆ. ಬೇರೆ ಯಾವುದೇ ದೇಶದಲ್ಲಿ ಹೀಗೆ ನಡೆಯುವುದಿಲ್ಲ. ದಯವಿಟ್ಟು ನೀವೇ ಸ್ವತಃ ಯೋಚಿಸಿʼ ಎಂದು ಬರೆದುಕೊಂಡಿದ್ದಾರೆ. ಮಲ್ಯ ಅವರ ಎಕ್ಸ್‌ ಪೋಸ್ಟ್‌ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಶಾಸಕರು ಸಚಿವರಿಗೆ ಸಿಎಂ ಎಚ್ಚರಿಕೆ
ಇನ್ನೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಮತ್ತೆ ದಾಳಿ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರನ್ನು ಟ್ರಾಪ್ ಮಾಡೋದಕ್ಕೆ ಇಡಿ ಅಧಿಕಾರಿಗಳು ತಯಾರಿ ನಡೆಸಿದ್ದು, ಇನ್ನೂ 3-4 ಮಂದಿ ಮೇಲೆ ದಾಳಿ ಆಗೋ ಸಾಧ್ಯತೆ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ನಾಯಕರ ಮೇಲೆ ಏಕೆ ದಾಳಿ ನಡೆಯುತ್ತಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೂ ಮುನ್ನವೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ದಾಳಿ ಬಗ್ಗೆ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದರು. ನಮ್ಮದು ವರ್ಷಕ್ಕೆ 2 ಸಾವಿರ ಕೋಟಿ ಟರ್ನ್ ಓವರ್ ಇದೆ. ವಿದೇಶದಲ್ಲಿ ಹೂಡಿಕೆ ಮಾಡಲು ಸರ್ಚ್ ಮಾಡುತ್ತಿದ್ದು, ಇನ್ನೂ ಹೂಡಿಕೆಯಾಗಿಲ್ಲ ಅಂತ ಸ್ಪಷ್ಟಪಡಿಸಿದ್ದರು.

ಇಡಿ ವಶಪಡಿಸಿಕೊಂಡಿರೋ 2 ಕೋಟಿ ಕ್ಲೈಮ್‌ ಮಾಡೋದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇಡಿ ಪ್ರಕಟಣೆ ಹೊರಡಿಸಿ, ಗುತ್ತಿಗೆದಾರರಿಂದ ಲಂಚ ಪಡೆದಿರೋದು ಹಾಗೂ ಪಿಡಬ್ಲ್ಯೂಡಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೋದನ್ನ ಬಹಿರಂಗಪಡಿಸಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
100 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟಬಡ ರೋಗಿಗಳಿಗೆ ಸೇರಬೇಕಿದ್ದ ಔಷಧಿಗಳು ತಿಪ್ಪೆ ಪಾಲುಇಂದಿನಿಂದ 108 ಅಂಬುಲೆನ್ಸ್ ನೌಕರರ ಮುಷ್ಕರ – ಸಾರ್ವಜನಿಕರಿಗೆ ಸಮಸ್ಯೆಯಾದ್ರೆ ಹುಷಾರ್ ಎಂದ ಖಾದರ್ಮನ್ಮುಲ್ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮತ್ತೆ ಮೂವರ ಬಂಧನ, 11ಕ್ಕೇರಿದ ಆರೋಪಿಗಳ ಸಂಖ್ಯೆನಮ್ಮದು ಸೌಜನ್ಯದ ಭೇಟಿಯಷ್ಟೇ – ಸಿದ್ದರಾಮಯ್ಯವರದಕ್ಷಿಣೆ ಕಿರುಕುಳ ಆರೋಪ; ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆನವರಾತ್ರಿ ಸಂಭ್ರಮದ ನಡುವೆ ಅವಘಡ – ಭಕ್ತರ ಮೇಲೆ ಬಿದ್ದ ಬೃಹತ್ ಲೈಟ್ ಸೆಟ್ಸ್ಟೇ ತಗೋಬಾರದಿತ್ತು, ಫೈಟ್ ಮಾಡಬೇಕಿತ್ತು – ಮೈಸೂರಿನಲ್ಲಿ ಸಿದ್ದು ಭೇಟಿಯಾದ ರಮೇಶ್‌ ಜಾರಕಿಹೊಳಿಅಂಜನಾದ್ರಿ ಬೆಟ್ಟದಿಂದ ಮುಜರಾಯಿ ಇಲಾಖೆಯ ಸಿಬ್ಬಂದಿ ಹೊರಕ್ಕೆ – ಎಲ್ಲ ಕಚೇರಿಗಳಿಗೆ ಬೀಗ ಜಡಿದ ವಿದ್ಯಾದಾಸ್ ಬಾಬಾಪಂಜಾಬ್‌ನಲ್ಲಿ ಡ್ರಗ್ಸ್ ವಿರೋಧಿ ಹೋರಾಟಗಾರನ ಹತ್ಯೆ; ಆರೋಪಿ ಅರೆಸ್ಟ್, ಅಂಗಡಿ ನೆಲಸಮ