LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತಕ್ಕೆ Su-57 ಸ್ಟೆಲ್ತ್ ಫೈಟರ್ ಜೆಟ್ ಆಫರ್‌ ನೀಡಿದ ಪುಟಿನ್‌

Advertisement
Advertisement

ನವದೆಹಲಿ: ಭಾರತೀಯ ವಾಯುಪಡೆಗೆ (IAF) ‘ತೇಜಸ್‌’ ಲಘು ಯುದ್ಧ ವಿಮಾನಗಳ ಸೇರ್ಪಡೆಯ ಯಶಸ್ಸಿನ ನಂತರ, ಕೇಂದ್ರ ಸರ್ಕಾರ ಸಾವಿರ ಕೋಟಿ ವೆಚ್ಚದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನಗಳನ್ನ ದೇಶೀಯವಾಗಿ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದೆ. ಈ ಹೊತ್ತಿನಲ್ಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತಕ್ಕೆ ಬಿಗ್‌ ಆಫರ್‌ವೊಂದನ್ನ ನೀಡಿದ್ದಾರೆ.

ಸುಖೋಯ್ Su-57 5ನೇ ತಲೆಮಾರಿನ ಸ್ಟೆಲ್ತ್‌ ಯುದ್ಧವಿಮಾನಕ್ಕೆ  ಸಂಬಂಧಿಸಿದಂತೆ ಭರ್ಜರಿ ಆಫರ್‌ವೊಂದನ್ನ ನೀಡಿದ್ದಾರೆ. 

ಒಂದು ದಿನದ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪುಟಿನ್‌, Su-57 5ನೇ ತಲೆಮಾರಿನ ಫೈಟರ್‌ ಜೆಟ್‌ ವಿಮಾನವನ್ನು ಭಾರತಕ್ಕೆ  ಪೂರೈಸಲು ರಷ್ಯಾ ಸಿದ್ಧವಿದೆ. ಇದರೊಂದಿಗೆ ಭಾರತದೊಂದಿಗೆ ಜಂಟಿಯಾಗಿ ಸುಖೋಯ್‌ Su-57 ಅನ್ನು ಅಭಿವೃದ್ಧಿಪಡಿಸಲು ರಷ್ಯಾ  ಸಿದ್ಧವಾಗಿದೆ. ನಿರ್ಣಾಯಕ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ರೆಡಿಯಿದೆ ಎಂದು ಹೇಳಿದ್ದಾರೆ.

ಇದರಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಇದು ಭಾರತದೊಂದಿಗೆ ಇರುವ ರಕ್ಷಣಾ ಸಂಬಂಧಗಳನ್ನ ಇನ್ನಷ್ಟು ಬಲಪಡಿಸಲು ರಷ್ಯಾದ ಇಚ್ಛೆಯನ್ನು ಸೂಚಿಸುತ್ತದೆ.


ಸದ್ಯ ಭಾರತದ 5ನೇ ತಲೆಮಾರಿನ ಸುಧಾರಿತ ಮಧ್ಯಮ ಶ್ರೇಣಿಯ ಯುದ್ಧ ವಿಮಾನಗಳನ್ನು (ಎಎಂಸಿಎ) ತಯಾರಿಸುವ ಯೋಜನೆ ಅಭಿವೃದ್ಧಿ ಹಂತದಲ್ಲಿದೆ. ಫೈಟರ್‌ ಜೆಟ್‌ಗಳನ್ನ ದೇಶೀಯವಾಗಿ ನಿರ್ಮಿಸುವ 15 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಈ ಯೋಜನೆಯನ್ವಯ 2030 ರ ದಶಕದ ಮಧ್ಯಭಾಗದಲ್ಲಿ ಸೇವೆಗೆ ಪ್ರಸ್ತುತಪಡಿಸುವ ಸಾಧ್ಯತೆಗಳಿವೆ.

ಈ ಮಧ್ಯೆ ಪಾಕಿಸ್ತಾನವು ಚೀನಾದಿಂದ ಶೆನ್ಯಾಂಗ್ J-35AE ಸ್ಟೆಲ್ತ್ ಫೈಟರ್‌ಗಳನ್ನ ಖರೀದಿಸಲು ಮುಂದಾಗಿರುವುದು ಕಳವಳ ಹೆಚ್ಚಿಸಿದೆ. ಇಂತಹ ಸನ್ನಿವೇಶದಲ್ಲಿ ಭಾರತವು ವಾಯುಪಡೆಗೆ ಬಲ ತುಂಬಲು 5ನೇ ತಲೆಮಾರಿನ ಯುದ್ಧವಿಮಾನಕ್ಕಾಗಿ ಹುಡುಕಾಟ ನಡೆಸುತ್ತಿರುವಾಗಲೇ ಪುಟಿನ್‌ ಈ ಆಫರ್‌ ನೀಡಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ – KPSC ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಹಣ ವಸೂಲಿ ಆರೋಪ – ಕಾಸು ಕೊಟ್ರೆ ತಪಾಸಣೆಯೆ ಇಲ್ವಂತೆ!ಸ್ಟಾಕ್‌ ಮಾರ್ಕೆಟ್‌ನಲ್ಲಿ ಲಾಸ್‌ – ಗುಂಡು ಹಾರಿಸಿಕೊಂಡು ಕೊಡಗಿನ ಯುವಕ ಆತ್ಮಹತ್ಯೆಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ಯಾಕೆ ಕೊಡಬಾರದು – ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆತನ್ನ ಪರ ತೀರ್ಪು ಕೊಡಲಿ ಅಂತ ಮಹಿಳಾ ನ್ಯಾಯಾಧೀಶರ ಚೇರ್‌ಗೆ ಮಾಟಮಂತ್ರ – ಮಹಿಳೆ ಬಂಧನಬಸ್​​ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತಿ – ಕಂಡಕ್ಟರ್ ಇರ್ಫಾನ್ ಅರೆಸ್ಟ್‌ಬೆಂಗಳೂರಿನಲ್ಲಿ ಮತ್ತೆ ತ್ರಿವಳಿ ಕೊಲೆ – ತಾಯಿ, ಅಜ್ಜಿ, ಮಾವನನ್ನು ಕೊಂದು ಪರಾರಿಯಾಗಬೇಕಿದ್ದವ ಸೂಸೈಡ್‌ಪ್ರಶಾಂತ್ ಕಿಶೋರ್ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯನ್ನು ಬಿಜೆಪಿ ದಿಢೀರ್‌ ಬದಲಾಯಿಸಿದ್ದು ಯಾಕೆ?ತೆಲಂಗಾಣದಲ್ಲಿ ಪೋಕ್ಸೋ ಆರೋಪಿಯಿಂದ ಮಾರಣಹೋಮ – ಪತ್ನಿ, ಮಕ್ಕಳು, ಸಂತ್ರಸ್ತೆ ಸೇರಿ 6 ಜನರ ಬರ್ಬರ ಹತ್ಯೆಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ – ಚಿಕ್ಕೋಡಿ ವ್ಯಾಪ್ತಿಯ 3 ಪ್ರಮುಖ ಸೇತುವೆಗಳು ಸಂಚಾರಕ್ಕೆ ಮುಕ್ತ