LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆ.15ರಂದು ವಿಧಾನಸೌಧದಲ್ಲಿ ಫ್ರೀಡಂ ಹಬ್ಬ – QR ಕೋಡ್ ಮೂಲಕ ಪೂರ್ವ ನೋಂದಣಿ ಕಡ್ಡಾಯ

Advertisement

ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ವಿಧಾನ ಸೌಧದಲ್ಲಿ ಫ್ರೀಡಂ ಹಬ್ಬ  ಆಚರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದ್ದು, ಕ್ಯೂಆರ್‌ ಕೋಡ್‌ (QR Code) ಮೂಲಕ ಪ್ರೀ ರಿಜಿಸ್ಟ್ರೇಷನ್‌ ಮಾಡಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ.

ಈ ಕುರಿತು ಜಿಬಿಎ (GBA) ಕೇಂದ್ರ ಕಛೇರಿಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮತ್ತು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದೇ ಮೊದಲ ಬಾರಿಗೆ ಫ್ರೀಡಂ ಹಬ್ಬ ನಡೆಯುತ್ತಿದೆ. ಜಿಬಿಎ ಮತ್ತು ಪೊಲೀಸ್ ಇಲಾಖೆ ಫ್ರೀಡಂ ಹಬ್ಬದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿವೆ. ಮಾಣಿಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ಸ್ವಾತಂತ್ರ‍್ಯ ಕಾರ್ಯಕ್ರಮ ಮುಗಿದ ಬಳಿಕ ಆ.15ರಂದು 12 ಗಂಟೆಯಿಂದ ವಿಧಾನಸೌಧ ಬಳಿ ಫ್ರೀಡಂ ಹಬ್ಬ ಶುರುವಾಗಲಿದೆ. ಜನರೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಫ್ರೀಡಂ ಹಬ್ಬವನ್ನ ಆಚರಣೆ ಮಾಡಬಹದು. ಫ್ರೀಡಂ ಹಬ್ಬದಲ್ಲಿ ಭಾಗವಹಿಸಲು ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದು, ಪ್ರಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಕಡ್ಡಾಯ. ಪ್ರಿ ರಿಜಿಸ್ಟ್ರೇಷನ್ ಇಲ್ಲದೇ ನೇರವಾಗಿ ಜನರಿಗೆ ಫ್ರೀಡಂ ಹಬ್ಬಕ್ಕೆ ಪ್ರವೇಶವಿಲ್ಲ. ಫ್ರೀಡಂ ಹಬ್ಬಕ್ಕೆ ಮಕ್ಕಳ ಜೊತೆ ಪೋಷಕರು ಬರಬೇಕು ಎಂದು ಸೂಚನೆ ನೀಡಿದ್ದಾರೆ. 

ಪ್ರೀಡಂ ಹಬ್ಬದಲ್ಲಿ ವಿವಿಧ ಕಲಾ ತಂಡಗಳ ಪ್ರದರ್ಶನ, ಗಾಂಧಿ ಪ್ರತಿಮೆ ಬಳಿ ಸ್ವಾತಂತ್ರ‍್ಯಕ್ಕಾಗಿ ನಡೆದ ಹೋರಾಟದ ಪ್ರದರ್ಶನ ಇರುತ್ತದೆ ಮತ್ತೆ ಫ್ರೀಡಂ ವಾಲ್ ಎಗ್ಸಿಬಿಷನ್ ಇರಲಿದೆ. ಬೆಳ್ಳಗೆ 12 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೂ ವಿವಿಧ ಕಾರ್ಯಕ್ರಮಗಳು ಇರಲಿದೆ. ನಂತರ ಸಂಜೆ ಆರು ಗಂಟೆಗೆ ರಸ ಸಂಜೆ ಸಂಗೀತ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು. 

ಈಗಾಗಲೇ 18 ಸಾವಿರಕ್ಕೂ ಹೆಚ್ಚು ಜನ ಆನ್‌ಲೈನ್ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ. ಶುಕ್ರವಾರ ಸಂಜೆವರೆಗೂ ನೋಂದಣಿಗೆ ಅವಕಾಶ ಇದೆ. ವಿಧಾನಸೌಧ ಟೂರ್ ಕೂಡ ಮಾಡಬಹುದು. 25 ಜನರ ತಂಡವಾಗಿ ಜನರಿಗೆ ವಿಧಾನಸೌಧ ಟೂರ್ ಮಾಡಿಸಲಿದ್ದಾರೆ. ಇದಕ್ಕೆ ಆಧಾರ್ ಕಾರ್ಡ್ ಕಡ್ಡಾಯ. 3 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ. ಆಗಸ್ಟ್ 15ರ ಬೆಳ್ಳಗೆ 11 ಗಂಟೆಗೆ ಕೆ.ಆರ್ ಸರ್ಕಲ್‌ನಿಂದ ವಿಧಾನಸೌಧದ ತಿಮ್ಮಯ್ಯ ರಸ್ತೆ ಬಂದ್ ಇರಲಿದೆ. ವಿಧಾನಸೌಧ ಮುಂಭಾಗದ ಎಗ್ಸಿಟ್ ಗೇಟ್ ಕೂಡ ಕ್ಲೋಸ್ ಇರಲಿದೆ. ವಾಹನ ಸವಾರರು ಬದಲಿ ಮಾರ್ಗ ಅನುಸರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ನರಗುಂದ ಬಂದ್ಗೌರಿಯ ಪೂಜೆಗೆ ಬೇಕೇ ಬೇಕು ಈ ವಿಶೇಷ ಪುಷ್ಪ – ಅದ್ಯಾವುದು ಗೊತ್ತಾ?ಸಾಲು ಸಾಲು ರಜೆ – ಊರಿನತ್ತ ಜನರ ದಂಡು; ನವಯುಗ ಟೋಲ್ ಬಳಿ ಟ್ರಾಫಿಕ್‌ ಜಾಮ್‌ಟ್ರೆಂಡ್‌ ಗೀಳಿಗೆ ಬಿದ್ದು ಟ್ರ್ಯಾಪ್‌ ಆಗ್ಬೇಡಿ – 80s ಫೋಟೊ ಟ್ರೆಂಡ್‌ ಬಗ್ಗೆ ಪೊಲೀಸರ ಎಚ್ಚರಿಕೆ!ಪರಪುರುಷನೊಂದಿಗೆ ಲವ್ವಿಡವ್ವಿ – ಹಾಸಿಗೆ ಹಿಡಿದ ಪತಿ ಕೊಂದು ಹೃದಯಾಘಾತ ಅಂತ ನಾಟಕವಾಡಿದ್ದ ಹೈನಾತಿಬೇರೆ ಯಾವುದೇ ದೇಶದಲ್ಲಿ ಹೀಗೆ ನಡೆಯೋದಿಲ್ಲ – ಸತೀಶ್‌ ಜಾರಕಿಹೊಳಿ ಪರ ವಿಜಯ್‌ ಮಲ್ಯ ಬ್ಯಾಟಿಂಗ್‌ಮಸೀದಿ ಇರೋ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿಡಿಸ್ತೀನಿ: ಇನ್ಸ್‌ಪೆಕ್ಟರ್‌ ಧಮ್ಕಿಸೆ.14ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ನಿಷೇಧಕ್ಸ್ ಸಭೆಗೂ ಮುನ್ನ ಮಹತ್ವದ ನಿರ್ಧಾರ ಘೋಷಿಸಿದ ಚೀನಾ – 6 ವರ್ಷಗಳ ನಂತರ ಭಾರತಕ್ಕೆ ಏರ್ಲೈನ್ಸ್ ಸೇವೆ ಪುನಾರಂಭಒಂದೇ ವೇಲ್‌ನಲ್ಲಿ ನೇಣಿಗೆ ಕೊರಳೊಡ್ಡಿದ ಆಂಟಿ & ಯುವಕ – ಲವ್‌ಗೆ ಕುಟುಂಬಸ್ಥರು ವಿರೋಧಿಸಿದ್ದಕ್ಕೆ ಆತ್ಮಹತ್ಯೆ ಶಂಕೆ