LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತುಂಗಭದ್ರಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದುರ್ಮರಣ

Advertisement
Advertisement
ರಾಯಚೂರು: ತುಂಗಭದ್ರಾ ನದಿಗೆ  ಸ್ನಾನಕ್ಕೆ ತೆರಳಿದ್ದ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ  ಕೊಸಗಿ ಮಂಡಲದ ಕಂದಕೂರು ಬಳಿ ನಡೆದಿದೆ.

ಮಾನ್ವಿ  ತಾಲೂಕಿನ ಕುರ್ಡಿ ಗ್ರಾಮದ ದಾಸರಿ ಉಮಾವತಿ (35), ದಾಸರಿ ರತ್ನಮ್ಮ (26) ಮಹೇಶ (24) ಮತ್ತು ಶಿವಾನಂದ (28) ಮೃತ ದುರ್ದೈವಿಗಳು. ಸಂಬಂಧಿಕರ ಮದುವೆಗೆ ತೆರಳಿದ್ದವರು ಮಧ್ಯಾಹ್ನ ಸ್ನಾನಕ್ಕೆ ನದಿಗೆ ಇಳಿದಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ.

ಆಂಧ್ರಪ್ರದೇಶ ಕರ್ನಾಟಕ ಗಡಿ ಭಾಗದ ರಾಜೊಳ್ಳಿಬಂಡಾ ಆಣೆಕಟ್ಟಿನ ಕೊನೆ ಭಾಗದ ಬಳಿ ಈ ಘಟನೆ ನಡೆದಿದೆ. ಆಂಧ್ರದ ಕರ್ನೂಲು ಜಿಲ್ಲೆಯ ಕೊಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಸ್ಥಳೀಯ ಮೀನುಗಾರರ ಸಹಾಯದಿಂದ ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಕೊಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುರ್ಡಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭವ್ಯ ತಿರಂಗಾ ರ್ಯಾಲಿ ದೇಶಭಕ್ತಿಯ ಸಂಭ್ರಮದೊಂದಿಗೆ ಯಶಸ್ವಿ3 ನಿಮಿಷದಲ್ಲಿ ಹನುಮಾನ್ ಚಾಲೀಸ ಪಠಣ – ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 4 ವರ್ಷದ ಬಾಲಕ!ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು – ಆ.14 ರಂದು ವಿಧಾನಸೌಧದ ಮುಂದೆ ಪ್ರತಿಭಟನೆಗೆ ಸಿದ್ಧತೆಪರಪ್ಪನ ಅಗ್ರಹಾರದಲ್ಲಿ ಮೊಬೈಲ್‌ ಪತ್ತೆ ಪ್ರಕರಣ – 2ನೇ ಎಫ್‌ಐಆರ್‌ ದಾಖಲುಯಂತ್ರಕ್ಕೆ ಸಿಲುಕಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಬಾಲಕ – ಪುಟಾಣಿಯ ಸಾಹಸಕ್ಕೆ ಡಿಕೆಶಿ ಮೆಚ್ಚುಗೆಆ.15ರಂದು ವಿಧಾನಸೌಧದಲ್ಲಿ ಫ್ರೀಡಂ ಹಬ್ಬ – QR ಕೋಡ್ ಮೂಲಕ ಪೂರ್ವ ನೋಂದಣಿ ಕಡ್ಡಾಯಕೇಸ್‌ ಇತ್ಯರ್ಥಕ್ಕೆ ಲಂಚಕ್ಕೆ ಕೈಯೊಡ್ಡಿದ ಪಿಎಸ್‌ಐ ʻಲೋಕಾʼ ಬಲೆಗೆಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ನೇಣಿಗೆ ಕೊರಳೊಡ್ಡಿದ ಪ್ರಿಯಕರಸೋಷಿಯಲ್‌ ಮೀಡಿಯಾ ಮೂಲಕ ಪಾಕ್ ಜೊತೆ ಸಂಪರ್ಕ ಶಂಕೆ; ಇಬ್ಬರು ವಶಕ್ಕೆಹೈಕೋರ್ಟ್‌ನಲ್ಲೂ ದರ್ಶನ್‌ಗೆ ಹಿನ್ನಡೆ – ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದ ಕೋರ್ಟ್‌